Woman Finger: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ 26 ವರ್ಷದ ವ್ಯಕ್ತಿಯೊಬ್ಬ ಮಹಿಳೆಯ ಬೆರಳನ್ನು ಕಚ್ಚಿದ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ (ಜೂ.2) ತಿಳಿಸಿದ್ದಾರೆ.
ಈ ಘಟನೆ ಮೇ 17ರಂದು ಮಧುರಾ ನಗರದಲ್ಲಿ ನಡೆದಿದೆ. ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಆರೋಪಿಯು ತನ್ನ ಪತ್ನಿಯೊಂದಿಗೆ ಮಹಿಳೆಯ ಮನೆಯಲ್ಲಿ ಬಾಡಿಗೆದಾರನಾಗಿದ್ದನು. ಏಪ್ರಿಲ್‌ನಲ್ಲಿ ದಂಪತಿಗಳು ಮನೆ ಖಾಲಿ ಮಾಡಿದ್ದರೂ, ಬಾಕಿ ಇರುವ ಚಿಟ್ ಫಂಡ್ ಕೊಡುವ ಬಗ್ಗೆ ಇಬ್ಬರ ನಡುವೆ ಗಲಾಟೆ ನಡೆದು ಕೊನೆಗೆ ಅದು ಹಿಂಸಾತ್ಮಕ ಘಟನೆಗೆ ತಿರುಗಿದೆ. ಈ ಜಗಳದಲ್ಲಿ 45 ವರ್ಷದ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: ಸಿನಿಮಾಗೆ ಹೋಲುವ ಕತೆಗಳನ್ನು ಸೃಷ್ಟಿಸಿ 10 ಪುರುಷರನ್ನು ಮದುವೆಯಾದ ಖತರ್ನಾಕ್ ಮಹಿಳೆ ಅರೆಸ್ಟ್! Marriage
ಮನೆಯ ಮಾಲೀಕತ್ವ ಹೊಂದಿರುವ ಮಹಿಳೆ ಚಿಟ್ ಫಂಡ್ ವಹಿವಾಟಿನಿಂದ ಆ ಬಾಡಿಗೆದಾರರಿಗೆ 30,000 ರೂ.ಗಳನ್ನು ಹಿಂದಿರುಗಿಸಬೇಕಾಗಿತ್ತು. ಈ ಕಾರಣಕ್ಕೆ ತೀವ್ರ ವಾಗ್ವಾದ ನಡೆದಿದ್ದು, ದಂಪತಿಗಳು ಈ ವಿಷಯವನ್ನು ಬಗೆಹರಿಸಲು ಮಹಿಳೆಯ ಮನೆಗೆ ಬಂದಾಗ ಜಗಳ ಹೆಚ್ಚಾಯಿತು. ಜಗಳದಲ್ಲಿ, ಆ ವ್ಯಕ್ತಿ ಮನೆ ಮಾಲೀಕಳ ಬೆರಳನ್ನು ತೀವ್ರವಾಗಿ ಕಚ್ಚಿ ತುಂಡರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಂತರ ಆ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು ಕೂಡ, ವೈದ್ಯರು ಮಹಿಳೆಯ ಬೆರಳನ್ನು ಮೊದಲಿನಂತೆ ಜೋಡಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು .
ಆಕೆಯ ಮಗಳು ಆ ದಂಪತಿಗಳ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)