ನ್ಯೂಸ್

ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ ಲಾರಿ ಡ್ರೈವರ್​ಗೆ ತಕ್ಕ ಪಾಠ ಕಲಿಸಿದ ಮಾಲೂರು ಜನರು

ಕೋಲಾರ: ರಾಷ್ಟ್ರಧ್ವಜ ಸುಟ್ಟು ದುರಹಂಕಾರ ಮೆರೆದ ಲಾರಿ ಡ್ರೈವರ್​ಗೆ ಸ್ಥಳೀಯರೇ ತಕ್ಕ ಪಾಠ ಕಲಿಸಿದ ಘಟನೆ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ನಡೆದಿದೆ.

ಈತ ಉತ್ತರ ಭಾರತ ಮೂಲದ ಡ್ರೈವರ್​. ದುರಹಂಕಾರದಿಂದ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದಾನೆ. ಅದನ್ನು ನೋಡಿದ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆತನ ಒಂದು ಕೈಯಲ್ಲಿ ರಾಷ್ಟ್ರಧ್ವಜ, ಮತ್ತೊಂದು ಕೈಯಲ್ಲಿ ಕರ್ನಾಟಕ ಧ್ವಜ ಹಿಡಿಸಿ, ಮೆರವಣಿಗೆ ಮಾಡಿದ್ದಾರೆ.

ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.