ಎಳ್ಳಮಾವಾಸ್ಯೆ ಅಂಗವಾಗಿ ಗವಟೂರಿನಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಉಲ್ಲಾಸ, ನಾಗೇಂದ್ರ, ದುಂಡರಾಜಪ್ಪ ಗೌಡ, ಕೃಷ್ಣಯ್ಯ ಶೆಟ್ಟಿ ಇತರರಿದ್ದರು.  
ನ್ಯೂಸ್

ಕ್ಷಮಾಗುಣ ಇದ್ದವರ ಬದುಕು ಶುದ್ಧ

ರಿಪ್ಪನ್‌ಪೇಟೆ: ಜೀವನದಲ್ಲಿ ಕ್ರೋಧವನ್ನು ತೊರೆದು ಕ್ಷಮಾಗುಣ ಇದ್ದವರ ಬದುಕು ಶುದ್ಧವಾಗಿರುತ್ತದೆ ಎಂದು ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗವಟೂರಿನ ಹೊಳೆಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಪೂಜೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಪ್ರೀತಿ, ಕರುಣೆ, ಮಮತೆ, ಮನುಷ್ಯರಿಗೆ ಇರಬೇಕಾದ ಸದ್ಗುಣಗಳು. ಇವುಗಳನ್ನು ಹೊಂದಿದ ವ್ಯಕ್ತಿ ಶ್ರೇಷ್ಠನಾಗುತ್ತಾನೆ. ಸಮಾಜದ ಪ್ರತಿಯೊಬ್ಬರ ಸಹಬಾಳ್ವೆಗೆ ಕ್ಷಮಾದಾನವು ಅಗತ್ಯ. ಇದನ್ನು ಪಾಲಿಸಿದಲ್ಲಿ ನೆಮ್ಮದಿ ಸಾಧ್ಯ. ಅಹಂ ಬೆಳೆಸಿಕೊಂಡರೆ ವ್ಯಕ್ತಿತ್ವ ಮೌಲ್ಯ ಕಳೆದುಕೊಳ್ಳುವ ಜತೆಗೆ ಬಂಧು, ಸ್ನೇಹಿತರು ದೂರವಾಗುತ್ತಾರೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತಿನಂತೆ ಹೊಂದಾಣಿಕೆಯೇ ಮುಖ್ಯ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಉಲ್ಲಾಸ, ಕಾರ್ಯದರ್ಶಿ ನಾಗೇಂದ್ರ, ಮುಖಂಡರಾದ ದುಂಡರಾಜಪ್ಪ ಗೌಡ, ಕೃಷ್ಣಯ್ಯ ಶೆಟ್ಟಿ, ಕುಬೇರಪ್ಪ, ವೆಂಕಟಾಚಲ, ಅರುಣಾಚಲ, ಜಿ.ಡಿ.ಮಲ್ಲಿಕಾರ್ಜುನ ಇತರರಿದ್ದರು.