ನ್ಯೂಸ್

ಕೊರೊನಾ ವೈರಸ್​ನಿಂದಾಗಿ ನಿರ್ಬಂಧಿತವಾಗಿರುವ ಡೈಮಂಡ್​ ಪ್ರಿನ್ಸ್​ಸ್​ ಹಡಗಿನಲ್ಲಿರುವವರಿಗೆ 2000 ಉಚಿತ ಆ್ಯಪಲ್​ ಫೋನ್​ ನೀಡಿದ ಜಪಾನ್​ ಸರ್ಕಾರ

ಟೋಕಿಯೊ​: ಕೊರೊನಾ ವೈರಸ್​ ಪತ್ತೆಯಾದ ಹಿನ್ನೆಲೆ ಜಪಾನ್​ನಲ್ಲಿ ನಿರ್ಬಂಧಿಸಲಾಗಿರುವ ಟೈಮಂಡ್​ ಪ್ರಿನ್ಸ್​ಸ್​ ಹಡಗಿನಲ್ಲಿರುವ ಜನರಿಗೆ 2000 ಉಚಿತ ಆ್ಯಪಲ್​ ಫೋನ್​ಗಳನ್ನು ಅಲ್ಲಿನ ಸರ್ಕಾರ ನೀಡಿದೆ.

ಸುಮಾರು 3,700 ಜನರು ಇರುವಂತಹ ಡೈಮಂಡ್​ ಪ್ರಿನ್ಸ್​ಸ್​ ಹಡಗಿನಲ್ಲಿ 350ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್​ ಇರುವುದು ಪತ್ತೆಯಾಗಿದೆ. ವೈರಸ್​ ಪತ್ತೆಯಾಗಿರುವವರನ್ನು ಪ್ರತ್ಯೇಕವಾಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು ಇನ್ನುಳಿದವರನ್ನು ಹಡಗಿನಲ್ಲಿ ತಪಾಸಣೆಯಲ್ಲಿಡಲಾಗಿದೆ. ಈ ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಉಚಿತ ಆ್ಯಪಲ್​ ಫೋನ್​ಗಳನ್ನು ವಿತರಿಸಲಾಗಿದೆ.

ಜಪಾನ್​ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಖಾಸಗಿ ವ್ಯವಹಾರಗಳ ಸಚಿವಾಲಯ ಮತ್ತು ಆಂತರಿಕ ವ್ಯವಹಾರ ಸಚಿವಾಲಯದ ಜತೆ ಸೇರಿಕೊಂಡ 2000 ಆ್ಯಪಲ್​ ಫೋನ್​ಗಳನ್ನು ಖರೀದಿಸಿ ಅದನ್ನು ಹಡಗಿಗೆ ಕಳುಹಿಸಿಕೊಟ್ಟಿದೆ. ಈ ಎಲ್ಲ ಫೋನುಗಳಲ್ಲಿ ಲೈನ್​ ಆ್ಯಪ್​ನ್ನು ಇನ್ಸ್ಟಾಲ್​ ಮಾಡಿಡಲಾಗಿದ್ದು, ಇದು ಜನರಿಗೆ ವೈದ್ಯಕೀಯ ನೆರವು ನೀಡಲಿದೆ. ಈ ಆ್ಯಪ್​ನ ಮೂಲಕ ಜನರು ವೈದ್ಯಕೀಯ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ತಮಗೆ ಅಗತ್ಯ ಔಷಧಗಳನ್ನು ತರಿಸಿಕೊಳ್ಳಬಹುದಾಗಿದೆ.

ಜಪಾನ್​ನಲ್ಲಿ ತಯಾರಿಸಲಾಗಿರುವ ಲೈನ್​ ಆ್ಯಪ್​ ಬೇರೆ ದೇಶದ ಮೊಬೈಲ್​ಗಳ ಆ್ಯಪ್​ ಸ್ಟೋರ್​ ಅಥವಾ ಪ್ಲೇ ಸ್ಟೋರ್​ನಲ್ಲಿ ಲಭ್ಯವಿಲ್ಲದಿರುವ ಕಾರಣ ಸರ್ಕಾರವೇ ಉಚಿತ ಫೋನ್​ಗಳನ್ನು ವಿತರಿಸಿದೆ ಎನ್ನಲಾಗಿದೆ. (ಏಜೆನ್ಸೀಸ್​)