ಬೆಂಗಳೂರು: ಸ್ನೇಹಿತರ ಜೊತೆ ಸೇರಿ ಪತ್ನಿಗೆ ಪತಿ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಕಳೆದ ವರ್ಷ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪತಿ ಹಾಗೂ ಆತನ ಸ್ನೇಹಿತರು ಡ್ರಗ್ಸ್ ಸೇವಿಸಿ ಲೈಂಗಿಕ ಕಿರುಕುಳ ಕೊಟ್ಟಿದ್ದು, ಆಂಧ್ರದ ಕಾಕಿನಾಡ ಮೂಲದ ಮಹಿಳೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪತಿಯ ವಿರುದ್ದ ದೂರು ದಾಖಲಿಸಿದ್ದಳು. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆಯಲ್ಲಿ ಗಾಂಜಾ ಸೇವಿಸಿ ಅತ್ಯಾಚಾರಕ್ಕೆ ಯತ್ನಿಸಿದ ಪತಿ ಹಾಗೂ ಆತನ ಸ್ನೇಹಿತರಿಂದ ತಪ್ಪಿಸಿಕೊಂಡ ಬಂದ ಪತ್ನಿ ಕಳೆದ ವರ್ಷ 13/10/2022ರಂದು ದೂರು ನೀಡಿದ್ದಳು. ಆಗ ಕೇಸ್ ವಾಪಸ್ಸು ಪಡೆಯಲು ಪೊಲೀಸರು ಒತ್ತಡ ಹೇರಿದಾಗ ಸ್ಟೇಷನ್ ಮುಂದೆ ಮಹಿಳೆ ಪ್ರತಿಭಟನೆಗೆ ಮುಂದಾಗಿದ್ದಾಳೆ.
ಪ್ರೀತಿಸಿ ಮದುವೆಯಾಗಿದ್ದರು
ಮ್ಯಾಟ್ರಿಮೋನಿಯಲ್ ನೋಡಿ ಪರಸ್ಪರ ಒಪ್ಪಿ ಕಾಕಿನಾಡ ಮೂಲದ ಅಖಿಲೇಷ್ ಧರ್ಮರಾಜ್ನನ್ನು ಮಹಿಳೆ 2019 ರಲ್ಲಿ ಮದುವೆಯಾಗಿದ್ದಳು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ದಂಪತಿಗಳು ವಾಸವಿದ್ದರು. ಮದುವೆಯಾದ ನಂತರ ಪತಿ ಅಖಿಲೇಷ್ ಮನೆಗೆ ನಿತ್ಯ ಗಾಂಜಾ ತಂದು ಸೇವನೆ ಮಾಡುತ್ತಿದ್ದ. ಈ ವೇಳೆ ಮತ್ತಿನಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಕೊನೆಗೆ ಸ್ನೇಹಿತರನ್ನೇ ಮನೆಗೆ ಕರೆತಂದು ಗಾಂಜಾ ಪಾರ್ಟಿ ಮಾಡಲಾಗಿತ್ತು. ಆಗ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ.
ಮನೆಗೆ ಬರುವಂತೆ ಕಿರುಕುಳ
ಈ ಘಟನೆಯ ನಂತರ ಪತಿ ವಾಪಸ್ಸು ಮನೆಗೆ ಬರುವಂತೆ ಪತ್ನಿಗೆ ಕಿರುಕುಳ ನೀಡಿದ್ದು, ಈ ವಿಷಯ ಹೊರಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಆದರೆ ನೊಂದು ಬಂದು ಮಹಿಳೆ ದೂರು ಕೊಟ್ಟರೂ ಪೊಲೀಸರು ಬಂಧಿಸಿರಲಿಲ್ಲ. ಆದರೀಗ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆ ತಂದಿದ್ದಾರೆ.