ನಾಗ್ಪುರ: ಪತ್ನಿಯನ್ನು ಕೊಂದ ಬಳಿಕ ಒಂದು ಗಂಟೆ ಮೊಬೈಲ್ ನೋಡಿ ಮೃತದೇಹದ ಪಕ್ಕದಲ್ಲಿ ಪತಿಯೊಬ್ಬ ಮಲಗಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಇದನ್ನೂ ಓದಿ: ಬೇರೆ ಮದುವೆಯಾಗಿದ್ದ ಪ್ರಿಯಕರನನ್ನು ಕಿಡ್ನ್ಯಾಪ್ ಮಾಡಿಸಿ, ಆತನ ಜತೆ ವಿವಾಹವಾದ ಯುವತಿ..!
ಮೃತ ಮಹಿಳೆಯನ್ನು ನೈರಾ ಶಾಫಿ ಖಾನ್ (35) ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಸಮೀರ್ ಮೊಹಮ್ಮದ್ ಹನೀಫ್ ಅನ್ಸಾರಿ (48) ಎಂದು ಗುರುತಿಸಲಾಗಿದೆ. ರವಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಹತ್ಯೆ ಬಳಿಕ ಆರೋಪಿಯು ನೇರವಾಗಿ ಬಂದು ಪೋಲಿಸರಿಗೆ ಶರಣಾಗಿದ್ದಾನೆ.
ಘಟನೆ ಹಿನ್ನೆಲೆ:
ಸಮೀರ್ ಅನ್ಸಾರಿ 7 ವರ್ಷಗಳ ಹಿಂದೆ ನೈರಾ ಖಾನ್ಳನ್ನು ಮದುವೆಯಾಗಿದ್ದ. ನೈರಾಗೆ ದೈಹಿಕ ಸಮಸ್ಯೆಗಳಿಂದ ಮಕ್ಕಳಾಗಿರಲಿಲ್ಲ. ಎರಡು ವರ್ಷಗಳ ಹಿಂದೆ ಸಮೀರ್ ಟೇಕ್ ಆಫ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಿದ್ದು, ಇಲ್ಲಿಯೇ ವಾಸವಾಗಿದ್ದರು. ಪತಿ ಪತ್ನಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಎರಡು ದಿನಗಳ ಹಿಂದೆ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು.
ಇದನ್ನೂ ಓದಿ: ಅಪರಿಚಿತರಿಂದ ಲಿಫ್ಟ್ ತೆಗೆದುಕೊಳ್ಳಲು ಹೋಗಿ ಚಿನ್ನದ ಸರ ಕಳೆದುಕೊಂಡ ಮಹಿಳೆ..!
ಪತ್ನಿ ಮಲಗಿದ್ದ ವೇಳೆ ಆಕೆಯ ತಲೆಯ ಮೇಲೆ ಸಿಲಿಂಡರ್ ಎತ್ತಿಹಾಕಿ ಕೊಲೆಗೈದಿದ್ದಾನೆ. ಬಳಿಕ ದಿಕ್ಕು ತೋಚದೇ ಆತ ಬಳಿಕ ಮತ್ತೆ ಒಂದು ಗಂಟೆ ಮೊಬೈಲ್ ನೋಡಿಕೊಂಡು ಪತ್ನಿಯ ಮೃತದೇಹದ ಪಕ್ಕದಲ್ಲೇ ಮಲಗಿದ್ದನೆಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ನಂತರ ಬೆಳಿಗ್ಗೆಯಾಗುತ್ತಿದ್ದಂತೆಯೇ ಆರೋಪಿ ತಾನಾಗಿಯೇ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಹುಡಕೇಶ್ವರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)