ನ್ಯೂಸ್

ಸಾವಿನಲ್ಲೂ ಮುರಿಯದ ಬಂಧ…ಪತ್ನಿಯ ಶವದ ಬಳಿಯೇ ಸಾವನ್ನಪ್ಪಿದ ಪತಿ

ತೆಲಂಗಾಣ: ನಿನ್ನ ಜೊತೆ ನಾನಿದ್ದೇನೆ.. ನಿನ್ನೊಂದಿಗಿದ್ದೇನೆ.. ಕಷ್ಟದಲ್ಲೂ.. ಸುಖದಲ್ಲಿ.. ನಿನ್ನ ಜೊತೆಗಿದ್ದೇನೆ.. ಒಬ್ಬರನ್ನೊಬ್ಬರು ಅಗಲಿ ಇರಲಾರೆವು ಎಂದ 70 ವರ್ಷಗಳ ದಾಂಪತ್ಯ ಜೀವನ ಕಳೆದಿದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಕಲ್ಲೂರು ಮಂಡಲದ ಚಂದ್ರುಪಟ್ಲ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಪತ್ನಿ ರಾಯಲ ಮಾರ್ತಮ್ಮ(96) ಹೃದಯಾಘಾತದಿಂದ ನಿಧನ. ಪತ್ನಿಯ ಸಾವನ್ನು ಸಹಿಸಲಾಗದೆ ಕೆಲವೇ ನಿಮಿಷಗಳಲ್ಲಿ ಪತಿ ರಾಯಲ ಯೆಹನ್ (112) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಖಮ್ಮಂ ಜಿಲ್ಲೆಯ ಕಲ್ಲೂರು ಮಂಡಲದ ಚಂದ್ರುಪಟ್ಲ ಗ್ರಾಮದ ರಾಯಲ ನಿವಾಸಿಯಾಗಿದ್ದಾರೆ.

ಯೋಹಾನು (112) ಮತ್ತು ರಾಯಲ ಮಾರ್ತಮ್ಮ (96) 70 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅವರು ತಮ್ಮ ವೈವಾಹಿಕ ಜೀವನವನ್ನು ಪರಸ್ಪರ ಅನ್ಯೋನ್ಯವಾಗಿ ಕಳೆದಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ರಾಯಲ ಯೋಹಾನು ಅವರಿಗೆ 112 ವರ್ಷ ವಯಸ್ಸಾಗಿದ್ದು, ವಯೋಸಹಜವಾಗಿ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದರು.

ಪತ್ನಿ ಮಾರ್ತಮ್ಮ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಖಮ್ಮಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹಠಾತ್ ಹೃದಯಾಘಾತದಿಂದ ಮಾರ್ತಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವೃದ್ಧೆಯ ಶವವನ್ನು ಮನೆಗೆ ತಂದು ಅನಾರೋಗ್ಯದಿಂದ ಬಳಲುತ್ತಿದ್ದ ರಾಯಲ ಯೋಹಾನು ಅವರಿಗೆ ಪತ್ನಿ ಮಾರ್ತಮ್ಮ ಪಾರ್ಥಿವ ಶರೀರವನ್ನು ನೋಡಿ ಸಹಿಸಲಾಗಲಿಲ್ಲ. ತನ್ನ ಹೆಂಡತಿ ಮೃತದೇಹ ನೋಡುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ. ದಂಪತಿ ನಿಧನದಿಂದ ಕುಟುಂಬಸ್ಥರು ಹಾಗೂ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ.