ನ್ಯೂಸ್

ವಾರಸುದಾರರಿಗೆ ಚಿನ್ನದ ಸರ ಹಸ್ತಾಂತರಿಸಿದ ಎಎಸ್ಪಿ

ರಾಣೆಬೆನ್ನೂರ: ಚಿನ್ನದ ಸರ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿರುವ ಇಲ್ಲಿಯ ಶಹರ ಠಾಣೆ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನದ ಸರವನ್ನು ಮಾಲೀಕರಿಗೆ ಎಎಸ್ಪಿ ಲಕ್ಷ$್ಮಣ ಶಿರಕೋಳ ಹಸ್ತಾಂತರಿಸಿದರು. ನಗರದಲ್ಲಿ ಕಳೆದ ತಿಂಗಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸುಧಾಬಾಯಿ ಕುಲಕಣಿರ್ ಎಂಬುವರ ಕೊರಳಿನಲ್ಲಿದ್ದ 1.50 ಲಕ್ಷ ಮೌಲ್ಯದ 20 ಗ್ರಾಂ. ಚಿನ್ನದ ಸರವನ್ನು ಆರೋಪಿತರಾದ ಸಂತೋಷ ಶಿಂಧೆ ಹಾಗೂ ದ್ಯಾಮಣ್ಣ ಸಣ್ಣನವರ ಎಂಬುವರು ದೋಚಿ ಪರಾರಿಯಾಗಿದ್ದರು. ಈ ಕುರಿತು ಸುಧಾಬಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಚಿನ್ನದ ಸರ ವಶಪಡಿಸಿಕೊಂಡಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಎಎಸ್ಪಿ ಲಕ್ಷ$್ಮ್ಮಣ ಶಿರಕೋಳ, ಡಿವೈಎಸ್ಪಿ ಲೋಕೇಶ, ಶಹರ ಸಿಪಿಐ ಡಾ. ಶಂಕರ, ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ದೂರುದಾರರ ಮನೆಗೆ ತೆರಳಿ ಸುಧಾಬಾಯಿ ಕುಲಕಣಿರ್ ಅವರಿಗೆ ಚಿನ್ನದ ಸರ ಹಸ್ತಾಂತರ ಮಾಡಿದ್ದಾರೆ.