ಮುಳಬಾಗಿಲು: ನಗರ ಹೊರವಲಯದ ಗೂಕುಂಟೆ ರಸ್ತೆಯ ಚೆಲುವನಾಯಕನಹಳ್ಳಿ ಬಳಿ ಪ್ರಾವಿಷನ್ ಸ್ಟೋರ್ ಅಂಗಡಿ ಒಳಗೆ ಕುಮಾರ್ ಎಂಬಾತ ಅನಧಿಕೃತವಾಗಿ ನಕಲಿ ಕ್ಲಿನಿಕ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ತಾಲೂಕು ಆರೋಗ್ಯಾಧಿಕಾರಿ ಡಾ.ಸುಗುಣ ನೇತೃತ್ವದ ತಂಡ ಮಂಗಳವಾರ ದಾಳಿ ಮಾಡಿ ಬೀಗ ಹಾಕಿಸಿದೆ. ಈ ಹಿಂದೆಯೂ ಇದೇ ಕುಮಾರ್ ನೂಗಲಬಂಡೆ ಬಡಾವಣೆಯಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿದ್ದ ಆರೋಪದ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿ ಬಂದ್ ಮಾಡಿಸಿದ್ದರೂ ಬೇರೊಂದು ಕಡೆ ಪ್ರಾವಿಷನ್ ಸ್ಟೋರ್ ನೆಪದಲ್ಲಿ ಕ್ಲಿನಿಕ್ ನಡೆಸುತ್ತಿದ್ದ. ತಾಲೂಕು ಆರೋಗ್ಯ ಇಲಾಖೆ ವ್ಯವಸ್ಥಾಪಕ ರಾಜನಾರಾಯಣ, ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ ಇದ್ದರು.