ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್  
ನ್ಯೂಸ್

ಕಾರ್ಖಾನೆ ಆರಂಭದಲ್ಲಿದ್ದ ಸಂತಸ ಈಗಿಲ್ಲ: ಆಯನೂರು ಮಂಜುನಾಥ

ಶಿವಮೊಗ್ಗ: ಶಾಹಿ ಎಕ್ಸ್‌ಪೋರ್ಟ್ 2014ರಲ್ಲಿ ಪ್ರಾರಂಭವಾದಾಗ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದ ಸಂತೋಷದಲ್ಲಿ ಸ್ಥಳೀಯರಿದ್ದರು. ಆದರೆ, ವಾಸ್ತವವಾಗಿ ಈ ಗಾರ್ಮೆಂಟ್ಸ್‌ನಲ್ಲಿ ಸ್ಥಳೀಯರು ಕಡಿಮೆ ಇದ್ದು, ಹೊರಗಿನವರಿಗೆ ಮಣೆ ಹಾಕಲಾಗಿದೆ ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಮಾಚೇನಹಳ್ಳಿಯ ಶಾಹಿ ಎಕ್ಸ್‌ಪೋರ್ಟ್ ಮುಂಭಾಗ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಹಾರ, ಉತ್ತರಪ್ರದೇಶದಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಇಲ್ಲಿನ ಧೂಳು ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ನೂರಾರು ಜನರಿಗೆ ಹೃದಯದ ತೊಂದರೆ ಉಂಟಾಗುತ್ತಿದೆ. 250 ಎಕರೆ ಭೂಮಿಯನ್ನು ಕರೆಂಟ್, ನೀರು, ಚರಂಡಿ ಎಲ್ಲ ಮೂಲಭೂತ ವ್ಯವಸ್ಥೆ ಕಲ್ಪಿಸಿ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಕೆಐಎಡಿಬಿ ಅವರು ಕೇವಲ ಎಕರೆಗೆ 8.5 ಲಕ್ಷ ರೂ.ಗೆ ನೀಡಿದ್ದಾರೆ. ಇದೊಂದು ಕೆಐಎಡಿಬಿಯ ಬಹುದೊಡ್ಡ ಹಗರಣ. ಇದರ ಹಿಂದೆ ನಾಡಿನ ದೊಡ್ಡ ದೊಡ್ಡ ಕೈಗಳಿವೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಈ ಕಾರ್ಖಾನೆಯ ಕರ್ಮಕಾಂಡದ ಹಿಂದೆ ಅನೇಕ ಗಣ್ಯರ ಪಿತೂರಿ ಇದೆ. ಕೇಸರಿ ಹಸಿರು ಟವೆಲ್‌ಗಳು ಓಡಾಡಿದೆ. ಹೋರಾಟಗಾರರಿಗೆ ಆಮಿಷ ತೋರಿಸಿ ಹತ್ತಿಕ್ಕುವ ಕೆಲಸವಾಗಿದೆ. ಆದರೂ ಧೈರ್ಯ ಮಾಡಿ ಕೆಲ ರೈತರು ಹೋರಾಟಕ್ಕೆ ಮುಂದಾಗಿದ್ದು, ಅವರಿಗೆ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದರು.