ನ್ಯೂಸ್

ಶ್ರೀರಾಮದೇವರ ಅದ್ದೂರಿ ಬ್ರಹ್ಮರಥೋತ್ಸವ

ಸಾಲಿಗ್ರಾಮ: ದಕ್ಷಿಣ ಭಾರತದಲ್ಲಿ ಸುಗ್ಗಿಯ ನಂತರ ನಡೆಯುವ ಇತಿಹಾಸ ಪ್ರಸಿದ್ಧ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮದೇವರ ಬ್ರಹ್ಮ ರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.


ಸೋಮವಾರ ಬೆಳಗ್ಗೆ 11.30ರಲ್ಲಿ ನಡೆದ ರಥೋತ್ಸವಕ್ಕೆ ಶಾಸಕ ಡಿ.ರವಿಶಂಕರ್ ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಬೆಟ್ಟದಪುರ ಮಲ್ಲಿಕಾರ್ಜುನ ಸ್ವಾಮೀಜಿ, ಕನಕ ಮಠದ ಶ್ರೀಶಿವಾನಂದ ಸ್ವಾಮೀಜಿ, ಕೆಪಿಸಿಸಿ ಸದಸ್ಯ ದೊಡ್ಡಸ್ವಾಮಿಗೌಡ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.


ರಥವು ದೇವಾಲಯದ ಸುತ್ತ ಸುತ್ತುವಾಗ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮತ್ತು ಸ್ಥಳೀಯ ಭಕ್ತರು ದೇವರಿಗೆ ಹಣ್ಣು-ದವನ ಎಸೆದು ತಮ್ಮ ಭಕ್ತಿ ಸಮರ್ಪಿಸಿದರಲ್ಲದೆ, ಸರತಿ ಸಾಲಿನಲ್ಲಿ ನಿಂತು ಸೀತಾ ಸಮೇತ ಶ್ರೀರಾಮ ಮತ್ತು ಲಕ್ಷ್ಮಣ ದೇವರ ದರ್ಶನ ಪಡೆದರು.


ರಥೋತ್ಸವಕ್ಕೆ ಬಂದಿದ್ದವರಿಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಸಕ ಡಿ.ರವಿಶಂಕರ್ ಅವರು ಪ್ರಸಾದದ ವ್ಯವಸ್ಥೆ, ದೇವಾಲಯಕ್ಕೆ ಆಗಮಿಸಿದ್ದವರಿಗೆ ಲಾಡು ವಿತರಣೆ ಮಾಡಿದರು.


ಜೆಡಿಎಸ್ ಯುವ ಮುಖಂಡ ಹಳಿಯೂರು ಮಧುಚಂದ್ರ ಮತ್ತು ಉದ್ಯಮಿ ಎಚ್.ಕೆ.ಶ್ರೀಧರ್, ಕೆ.ಆರ್.ನಗರ ರೋಟರಿ ಮತ್ತು ಕರ್ನಾಟಕ ರಾಜ್ಯ ಗ್ರಾಪಂ ಕ್ಲರ್ಕ್ ಕಂ ಡಿಇಒ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ದೊಡ್ಡ ಸ್ವಾಮೇಗೌಡ, ವನಜಾಕ್ಷಮ್ಮ, ಸುನೀತಾ ರವಿಶಂಕರ್, ಕುಪ್ಪೆ ಗ್ರಾಪಂ ಅದ್ಯಕ್ಷೆ ಗೀತಾ, ಉಪಾಧ್ಯಕ್ಷೆ ಗೀತಾ, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯ ಗೋವಿಂದೇಗೌಡ, ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಕಂಠಿಕುಮಾರ್ ಮಹದೇವ್, ಕಾಂಗ್ರೆಸ್ ಮುಖಂಡರಾದ ಹೆಬ್ಬಾಳು ಸೋಮಪ್ಪ, ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಹರೀಶ್, ಮೋಹನ್‌ಕುಮಾರ್, ಸಾಲಿಗ್ರಾಮ ತಾಲೂಕು ಶಿರಸ್ತೇದಾರ್ ಶಿವಕುಮಾರ್, ಉಪ ತಹಸೀಲ್ದಾರ್ ಕೆ.ಜೆ.ಶರತ್, ಆರ್.ಐ.ಚಿದಾನಂದ್ ,ದೇವಾಲಯದ ಇಒ ಕೆ.ರಘು, ಆರೋಗ್ಯಾಧಿಕಾರಿ ಡಾ.ನಟರಾಜು, ಎಇಇಗಳಾದ ಅರ್ಕೇಶಮೂರ್ತಿ, ಹಾರಂಗಿ ಗುರುರಾಜ್, ದೇವಾಲಯದ ಅರ್ಚಕರಾದ ವಾಸುದೇವನ್, ನಾರಾಯಣ ಅಯ್ಯಂಗಾರ್ ಮತ್ತಿತರರು ಇದ್ದರು.


ಮುನ್ನಚ್ಚರಿಕೆಯ ಕ್ರಮವಾಗಿ ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಕೃಷ್ಣರಾಜು, ಶಿವಾನಂದ್, ಪಿಎಸ್‌ಐಗಳಾದ ಕುಮುದಾ, ಧನರಾಜು, ಅಚ್ಚುತಾ, ಕೋಟೆಗೌಡ ಬಿಗಿ ಭದ್ರತೆ ಏರ್ಪಡಿಸಿದ್ದರು.