ನ್ಯೂಸ್

ಆಕ್ಸಿಜನ್​ಗೆ ಗರಿಷ್ಠ ಬೆಲೆ ನಿಗದಿ ಮಾಡಿದ ಸರ್ಕಾರ

ನವದೆಹಲಿ: ತೀವ್ರ ಅಸ್ವಸ್ಥಗೊಂಡಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಲಿಕ್ವಿಡ್ ಆಕ್ಸಿಜನ್​ಗೆ ಗರಿಷ್ಠ ಮಾರಾಟ ದರ ನಿಗದಿ ಮಾಡಿ ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಕರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಆಕ್ಸಿಜನ್ ಸಿಲಿಂಡರ್​ಗಳ ಬೇಡಿಕೆ ಹೆಚ್ಚಾಗಿದೆ. ಕೆಲ ಏಜೆನ್ಸಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದು, ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಉತ್ಪಾದಕರಿಗೆ ಪ್ರತಿ ಘನ ಲೀಟರ್​ಗೆ 15.22 ರೂಪಾಯಿಯನ್ನು ನಿಗದಿಸಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪ್ರತಿ ಘನ ಲೀಟರ್​ಗೆ 25.71 ರೂಪಾಯಿ ನಿಗದಿ ಮಾಡಲಾಗಿದೆ. ಈ ಬೆಲೆಯು ಆರು ತಿಂಗಳಿಗೆ ಅನ್ವಯವಾಗಲಿದೆ. ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಬೆಲೆ ನಿಗದಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿಲೂಸ್​ ಸ್ವೀಟ್​ಗೂ ಟೈಟ್​ ರೂಲ್ಸ್​.. ಇದು ಸ್ವೀಟ್​ ಅಂಗಡಿಯವರಿಗೆ ಸಿಹಿ ಸುದ್ದಿನಾ? ಶೇ. 82ಕ್ಕೇರಿದ ಗುಣಮುಖ ಪ್ರಮಾಣ: ದೇಶದಲ್ಲಿ ಶುಕ್ರವಾರ 93 ಸಾವಿರ ಜನರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 48.5 ಲಕ್ಷಕ್ಕೆ ಏರಿಕೆಯಾಗಿದೆ.

20 ಲಕ್ಷ ದಾಟಲಿದೆ ಸಾವಿನ ಸಂಖ್ಯೆ

ಕರೊನಾ ಸೋಂಕಿಗೆ ಔಷಧ ಲಭ್ಯವಾಗುವುದರೊಳಗೆ ವಿಶ್ವದಲ್ಲಿ 20 ಲಕ್ಷದಷ್ಟು ಜನರು ಮೃತರಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಅಭಿಪ್ರಾಯ ವ್ಯಕ್ತಪಡಿಸಿದೆ.

80 ಸಾವಿರ ರೂ. ಕೋಟಿ ಬೇಕು

ಮುಂದಿನ ವರ್ಷದ ಅಂತ್ಯದೊಳಗೆ ಕರೊನಾ ಔಷಧ ಸಿದ್ಧವಿರುವ ಸಾಧ್ಯತೆಯಿದ್ದು, ಭಾರತ ಸರ್ಕಾರಕ್ಕೆ ಕನಿಷ್ಠ 80 ಸಾವಿರ ಕೋಟಿ ರೂ. ಔಷಧ ಖರೀದಿಗೆ ಬೇಕಾಗಲಿದೆ ಎಂದು ಸೆರಂ ಇನ್​ಸ್ಟಿಟ್ಯೂಟ್​ನ ಆದರ್ ಪೂನಾವಾಲಾ ಹೇಳಿದ್ದಾರೆ. ಔಷಧ ಸಂಗ್ರಹಣೆ, ವಿತರಣೆ ಬಗ್ಗೆ ಯೋಜನೆ ಮತ್ತು ಮಾರ್ಗದರ್ಶನದ ಅವಶ್ಯಕತೆಯಿದೆ ಎಂದಿದ್ದಾರೆ.