ನ್ಯೂಸ್

ಇಬ್ಬರು ವೈದ್ಯರು ಸೇರಿ 4 ಅಧಿಕಾರಿಗಳನ್ನು ಬಲಿ ಹಾಕಿದ ಸರ್ಕಾರ; ಕಾರಣವೇನು ಗೊತ್ತಾ?

ಬೆಂಗಳೂರು: ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದಿದ್ದ ಮೂವರು ಅಧಿಕಾರಿಗಳನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿದೆ. ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ.

ವಾಣಿಜ್ಯ ತೆರಿಗೆಗಳ ಇಲಾಖೆ ಸಹಾಯಕ ಆಯುಕ್ತ ಡಾ.ಎಂ.ಎಚ್.ನಾಗೇಶ್ 2007-08ರಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ನೌಕರರ ಪಿಂಚಣಿ ಮೊತ್ತ 1 ಕೋಟಿ ರೂ.ವನ್ನು ಖಾಸಗಿ ಬ್ಯಾಂಕ್ ಯೂನಿಟ್ ಟ್ರಸ್ಟ್ ಆ್ ಇಂಡಿಯಾದಲ್ಲಿ ಹೂಡಿಕೆ ಮಾಡಿದ್ದು ಮತ್ತು ಕೋಟ್ಯಂತರ ರೂ. ಮೌಲ್ಯದ ಯಂತ್ರೋಪಕರಣ ಖರೀದಿಸಿ ಬಳಸದೇ ಹಾಗೇ ಇಟ್ಟುಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಐದು ವರ್ಷ ಸರಳ ಸಜೆ ಹಾಗೂ 20 ಲಕ್ಷ ರೂ. ದಂಡ ವಿಧಿಸಿತ್ತು. ಈ ಸರ್ವೋಚ್ಛ ನ್ಯಾಯಾಲಯವು 1998ರ ಗೆಜೆಟೆಡ್ ಪ್ರೊಬೆಷನರುಗಳ ನೇಮಕಾತಿಗೆ ಸಂಬಂಧಿಸಿದಂತೆ ನೀಡಿರುವ ಆದೇಶದಂತೆ ಹುದ್ದೆ ಮರು ಹಂಚಿಕೆ ಮಾಡಿದ್ದರಿಂದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರ ವೃಂದದ ಹುದ್ದೆಯಲ್ಲಿದ್ದರು. ಇದೀಗ ಅವರನ್ನು ಸೇವೆಯಿಂದ ವಜಾಗೊಳಿಸುವ ದಂಡನೆ ವಿಧಿಸಲಾಗಿದೆ.

ಅದೇ ರೀತಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರಾಗಿದ್ದ, ಹಾಲಿ ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಎಸ್.ಡಿ.ನಾಗಮಣಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

2010ರಲ್ಲಿ ಚಿತ್ರದುರ್ಗ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಟ್ಯುಬೆಕ್ಟಮಿ ಶಸಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯಿಂದ ನಾಗಮಣಿ 2500 ರೂ. ಲಂಚಕ್ಕೆ ಬೇಡಿಕೆ ಇಟ್ಟು, 1500 ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಟ್ರ್ಯಾಪ್‌ಗೆ ಸಿಲುಕಿದ್ದರು. ಅವರನ್ನು ಲೋಕಾಯುಕ್ತ ಶಿಾರಸಿನಂತೆ ಸೇವೆಯಿಂದ ವಜಾಗೊಳಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ರಾಮನಗರ ಜಿಲ್ಲಾ ಆಸ್ಪತ್ರೆಯ ಸ್ತ್ರೀ ತಜ್ಞರಾಗಿದ್ದ ಡಾ.ಉಷಾ ಎಸ್.ಕದರಮಂಡಲಗಿ, 2015ರಲ್ಲಿ ಹೆರಿಗೆ ನಂತರ ಡಿಸ್‌ಚಾರ್ಜ್‌ಗಾಗಿ 5000 ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸುವಂತೆ ಉಪಲೋಕಾಯುಕ್ತರು ಶಿಫಾರಸು ಮಾಡಿದ್ದರು. ಸರ್ಕಾರ ಈ ಶಿಾರಸನ್ನು ಒಪ್ಪಿ ತೀರ್ಮಾನ ಕೈಗೊಂಡಿದೆ.

ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್ ಹಳ್ಳಿಗುಡಿ ಎಂಬಾತನನ್ನು ಪೋಕ್ಸೋ ಕೇಸಿನಲ್ಲಿ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.