ಬೆಂಗಳೂರು: ಹೊಸ ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಮತ್ತೆ ಬಂಪರ್ ಕೊಡುಗೆ ಘೋಷಣೆಯಾಗಿದೆ. ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಆದೇಶ ನೀಡಿದೆ.
ಎಫ್ಆರ್‌ಪಿ ದರ ಹೊರತುಪಡಿಸಿ, ಪ್ರತಿ ಮೆಟ್ರಿಕ್ ಟನ್‌ಗೆ 100 ರೂಪಾಯಿ ಹೆಚ್ಚು ಪಾವತಿಸಲು ಕಾರ್ಖಾನೆಗಳಿಗೆ ಆದೇಶಿಸಲಾಗಿದೆ. ಈ ಮೂಲಕ ರಾಜ್ಯದ ಕಬ್ಬು ಬೆಳೆಗಾರರಿಗೆ 622 ಕೋಟಿ ರೂ. ಹೆಚ್ಚುವರಿಯಾಗಿ ಸಂದಾಯವಾಗಲಿದೆ.
ಈ ಮುನ್ನ ರಾಜ್ಯ ಸರ್ಕಾರ ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ 50 ರೂ.ಗಳಂತೆ ಒಟ್ಟು ಎಥೆನಾಲ್‌ನಿಂದ 204 ಕೋಟಿ ರೂ. ಪಾವತಿಸಲು ಸರ್ಕಾರ ಆದೇಶಿಸಿತ್ತು. ಕಬ್ಬಿನ ಉಪ ಉತ್ಪನ್ನಗಳಾದ ಎಥೆನಾಲ್ ಮತ್ತು ಮೊಲ್ಯಾಸಿಸ್ ಮೂಲಕ ಒಟ್ಟಾರೆ ಈ ಸಾಲಿನಲ್ಲಿ ಎಫ್ಆರ್‌ಪಿ ದರ ಹೊರತುಪಡಿಸಿ, ಕಬ್ಬು ಬೆಳೆಗಾರರಿಗೆ ಒಟ್ಟು 804 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಈವರೆಗೆ ಆದೇಶಿಸಲಾಗಿದೆ.