ಎನ್.ಆರ್.ಪುರ: ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ ಸಹ ಭಾಗಿತ್ವದಲ್ಲಿ ಸಸ್ಯ ಶ್ಯಾಮಲ ಕಾರ್ಯಕ್ರಮದಡಿ ಇಂದಿನಿಂದ ಸೆ.29ರವರೆಗೆ ತಾಲೂಕಿನ ಎಲ್ಲ ಶಾಲೆಗಳಲ್ಲೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಿಇಒ ಕೆ.ಆರ್.ಪುಷ್ಪಾ ಹೇಳಿದರು.
ಸೋಮವಾರ ಮೆಣಸೂರು ಗ್ರಾಪಂ ವ್ಯಾಪ್ತಿಯ ಲಿಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡನೆಡುವ ಮೂಲಕ ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಯೋಜನೆಯಂತೆ ರಾಜ್ಯದಾದ್ಯಂತ ಸ್ಥಳಾವಕಾಶ ಇರುವ ಶಾಲೆಗಳ ಸುತ್ತಾ 1 ವರ್ಷದ ಅವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ತಾಲೂಕಿನಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಶಾಲಾ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂಬುವುದು ಗಿಡ ನೆಡುವ ಉದ್ದೇಶವಾಗಿದೆ. ನೆಟ್ಟ ಗಿಡಗಳನ್ನು ಶಾಲಾ ಮಕ್ಕಳು ಪ್ರತಿ ನಿತ್ಯ ನೀರು ಹಾಕಿ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕುಮಾರೇಶ, ಮೆಣಸೂರು ಗ್ರಾಪಂ ಸದಸ್ಯ ಎನ್.ಡಿ.ಪ್ರಸಾದ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಇಸಿಒ. ಬಿ.ಕೆ.ರಂಗಪ್ಪ, ಸಂಗೀತ, ಸಿಆರ್‌ಪಿ ದೇವರಾಜ್, ಜಯಣ್ಣ, ವಿಜಯಕುಮಾರ್, ಧನಂಜಯ ಮೇಧೂರ, ಎಚ್.ಮಂಜುನಾಥ್, ಸಾನಿಯಾ, ಕೃಷ್ಣ ಮೂರ್ತಿ, ರಮೇಶ್ ಇದ್ದರು.