ವಿಜಯಪುರ: ಈ ಶತಮಾನದ ನಡೆದಾಡುವ ದೇವರು, ಮಹಾನ್ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ(82)ಗಳು ಸೋಮವಾರ ಸಂಜೆ 6.05 ನಿಮಿಷದ ವೇಳೆಗೆ ಇಹಲೋಕ ಪಯಣ ಮುಗಿಸಿ, ಶಿವೈಕ್ಯರಾಗಿದ್ದಾರೆ. ಜ್ಞಾನಾಯೋಗಾಶ್ರಮದಲ್ಲಿ ಕಳೆದೊಂದು ತಿಂಗಳಿನಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ವಯೋಸಹಜವಾಗಿ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ.
- ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ಸಿದ್ದೇಶ್ವರ ಶ್ರೀಗಳು ಅಂತಿಮ ವಿಧಿ ವಿಧಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿಸಲು ತೀರ್ಮಾನಿಸಲಾಗಿದೆ.
- ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ 4 ಗಂಟೆ ವರೆಗೆ ಜ್ಞಾನ ಯೋಗಾಶ್ರಮದಲ್ಲಿ ಅಂತಿಮ ದರ್ಶನ ಕಲ್ಪಿಸಲಾಗುತ್ತಿದೆ.
- ನಾಳೆ(ಜ.3) ಬೆಳಗ್ಗೆ 4.30 ರಿಂದ ಸೈನಿಕ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ರಿಂದ ಸಂಜೆ 3 ಗಂಟೆಯವರೆಗೆ ಅಂತಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
- ಸಂಜೆ 4 ಗಂಟೆ ವೇಳೆಗೆ ಸಕಲ ಸರ್ಕಾರಿ ಗೌರವ ನೆರವೇರಲಿದೆ.
- ಸಂಜೆ 5 ಗಂಟೆಗೆ ಜ್ಞಾನಯೋಗಾಶ್ರಮದಲ್ಲಿ ಅಗ್ನಿಸ್ಪರ್ಶ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ.