ನ್ಯೂಸ್

ಕೋವಿಡ್​ಗೆ ಮತ್ತೊಬ್ಬ ಎಎಸ್​ಐ ಬಲಿ

ಬೆಂಗಳೂರು: ದೇಶವನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾ ಈಗ ಖಾಕಿಪಡೆಯ ಒಬ್ಬೊಬ್ಬರನ್ನೇ ಬಲಿ ಪಡೆಯುತ್ತಿದ್ದು, ಮತ್ತಷ್ಟು ಆತಂಕ ತಂದೊಡ್ಡಿದೆ.

ಶುಕ್ರವಾರ ರಾತ್ರಿ ಮನೆಯ ಶೌಚಗೃಹದಲ್ಲಿ ಕುಸಿದು ಬಿದ್ದು ಮೃತಪಟ್ಟ ವೈಟ್​ಫೀಲ್ಡ್ ಪೊಲೀಸ್ ಠಾಣೆಯ ಎಎಸ್ಐ ಅವರಿಗೂ ಕರೊನಾ ಸೋಂಕು ದೃಢಪಟ್ಟಿದೆ. ಇದನ್ನೂ ಓದಿರಿ ಸೈಕಲ್​ ಏರಲಿದ್ದಾರೆ ಕಾಂಗ್ರೆಸ್​ ನಾಯಕರು!

ಮೊನ್ನೆ ರಾತ್ರಿ ಟಾಯ್ಲೆಟ್​ನಲ್ಲೇ ನಿತ್ರಾಣವಾಗಿ ಬಿದ್ದ 57 ವರ್ಷದ ಎಎಸ್ಐ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದರು.

ಇದೀಗ ಸ್ವ್ಯಾಬ್ ಟೆಸ್ಟ್​ನಲ್ಲಿ ಮೃತ ಎಎಸ್​ಐಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇದುವರೆಗೆ ಸಿಲಿಕಾನ್ ಸಿಟಿಯಲ್ಲಿ ನಾಲ್ವರು ಪೊಲೀಸರು ಕರೊನಾಗೆ ಬಲಿಯಾಗಿದ್ದಾರೆ.