ನ್ಯೂಸ್

ಕ್ವಾರಂಟೈನ್​ ಕೇಂದ್ರದಲ್ಲಿದ್ದವರಿಗೆ ಕೊಟ್ಟ ಅನ್ನದಲ್ಲಿ ಹುಳ: ಬಿಪಿ ಮಾತ್ರೆ ಕೇಳಿದ್ರೂ ಕೊಡ್ತಿಲ್ಲ...

ರಾಯಚೂರು: ಕೆಲವು ಕ್ವಾರಂಟೈನ್​ ಕೇಂದ್ರಗಳು ಅವ್ಯವಸ್ಥೆಗಳ ಆಗರವಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ನಿನ್ನೆ ಜಮಖಂಡಿ ನಗರದ ಒಂದು ಕ್ವಾರಂಟೈನ್​ ಕೇಂದ್ರದಲ್ಲಿರುವ ಕೂಲಿ ಕಾರ್ಮಿಕರು ತಮ್ಮನ್ನು ಗಮನಿಸುವವರೇ ಇಲ್ಲ ಎಂದು ಆರೋಪಿಸಿ ಗೇಟ್​ ಬಳಿ ಬಂದು ತಟ್ಟೆ ಬಡಿದು ಪ್ರತಿಭಟನೆ ನಡೆಸಿದ್ದರು.

ಇದೀಗ ರಾಯಚೂರಿನ ದೇವದುರ್ಗ ಪಟ್ಟಣದಲ್ಲಿ ಕ್ವಾರಂಟೈನ್​ನಲ್ಲಿ ಇದ್ದವರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಪಟ್ಟಣದ ಡಿಗ್ರಿ ಕಾಲೇಜಿನಲ್ಲಿ ಕ್ವಾರಂಟೈನ್​​ನಲ್ಲಿರುವ ಸುಮಾರು 100 ಜನರಿಗೆ ನಿನ್ನೆ ರಾತ್ರಿ ನೀಡಿದ ಊಟದಲ್ಲಿ ಹುಳಗಳು ಪತ್ತೆಯಾಗಿವೆ.

ಅಷ್ಟೇ ಅಲ್ಲ, ಇಲ್ಲಿ ಹಲವರಿಗೆ ರಕ್ತದೊತ್ತಡ ಇದ್ದು, ಮಾತ್ರೆ ತಂದುಕೊಡಿ ಎಂದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದೂ ಅಲ್ಲಿದ್ದವರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)