ಹನಗೋಡು ಸಮೀಪದ ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಗೀತಾ, ಗಣಪತಿ, ಅಮಾಸೆಗೌಡ, ಕೆ.ಎಸ್.ಆನಂದ್, ಚಂದ್ರು ಇದ್ದರು. 
ನ್ಯೂಸ್

ಶ್ರೀಕೃಷ್ಣ ದರ್ಶನ ನೀಡಿದ ಸಾಕ್ಷಿ ಇಂದಿಗೂ ಇದೆ

ಹನಗೋಡು: ಇಲ್ಲಿಗೆ ಸಮೀಪದ ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನೇರಳಕುಪ್ಪೆ ಗ್ರಾಪಂ ಅಧ್ಯಕ್ಷೆ ಗೀತಾ ಸುರೇಶ್ ಮಾತನಾಡಿ, ಕನಕದಾಸರು ಇಂದಿನ ಸಮಾಜದಲ್ಲಿ ಮನುಷ್ಯ ಸಮಾಜಕ್ಕೆ ಯಾವ ರೀತಿ ಹೊಂದಿಕೊಂಡು ಹೋಗಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಇಂದಿಗೂ ಉಡುಪಿ ಶ್ರೀಕೃಷ್ಣ ಮಠದಲ್ಲಿ ಕನಕದಾಸರಿಗೆ ಶ್ರೀಕೃಷ್ಣ ಕಿಂಡಿಯಲ್ಲಿ ದರ್ಶನ ನೀಡಿರುವ ಸಾಕ್ಷಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರೋಹನ್, ಆರೋಗ್ಯ ಸಹಾಯಕಿ ನಿತ್ಯಾ ಚಂದ್ರು, ಆಶಾ ಕಾರ್ಯಕರ್ತೆ ಕಲಾವತಿ ಅವರನ್ನು ಸನ್ಮಾನಿಸಲಾಯಿತು.

ತಾಪಂ ಮಾಜಿ ಸದಸ್ಯ ಕೆ.ಗಣಪತಿ, ಗ್ರಾಪಂ ಸದಸ್ಯ ಅಮಾಸೆಗೌಡ, ಮುಖಂಡರಾದ ಕೆ.ಎಸ್.ಆನಂದ್, ಸುರೇಶ, ಶೇಖರ, ರಾಜೇಶ, ಆರೋಗ್ಯ ಸಹಾಯಕ ಚಂದ್ರು ಸೇರಿದಂತೆ ಇತರರು ಇದ್ದರು.