ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅಡಿಯಲ್ಲಿ ಸಿಲುಕಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲೂಕಿನ ನಡಾಡಿ ಎಂಬ ಗ್ರಾಮದ ವಸ್ತಿಹಳ್ಳದ ಬಳಿ ವಾರದ ಹಿಂದೆ ಈ ಘಟನೆ ಸಂಭವಿಸಿದೆ. ಕಾಡಂಚಿನಲ್ಲಿರುವ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅಡಿಯಲ್ಲಿ ತೂರಿ ಹೋಗಲು ಸುಮಾರು 40 ವರ್ಷದ ಆನೆ ಯತ್ನಿಸಿದೆ. ಈ ವೇಳೆ ಹೊಟ್ಟೆ ಭಾಗ ಬ್ಯಾರಿಕೇಡ್ ಕೆಳಭಾಗದಲ್ಲಿ ಸಿಲುಕಿದೆ. ಇದರಿಂದ ಬಿಡಿಸಿಕೊಳ್ಳಲಾಗದೆ ಗಂಟೆಗಟ್ಟಲೆ ಒದ್ದಾಡಿದೆ. ಇದನ್ನೂ ಓದಿರಿ ಕೋವಿಡ್ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್ಡೌನ್ ಬೇಡ: ಪ್ರತಾಪ್ಸಿಂಹ
ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಕಂಬಿಗಳನ್ನು ಸಡಿಲಿಸಿ ಆನೆಯನ್ನು ಬಂಧ ಮುಕ್ತಿಗೊಳಿಸಿದ್ದಾರೆ. ಆನೆ ಕಂಬಿ ನಡುವೆ ಸಿಲುಕಿರುವ ವೇಳೆ ಸ್ಥಳೀಯರು ತೆಗೆದ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿವೆ.