ನವರಾತ್ರಿ ಅಂಗವಾಗಿ ಸಾಗರದಲ್ಲಿ ಗಾಯತ್ರಿ ಮಹಿಳಾ ಮಂಡಳಿಯಿಂದ ಆಯೋಜಿಸಿರುವ ಗೊಂಬೆ ಪ್ರದರ್ಶನ. 
ನ್ಯೂಸ್

ಗೊಂಬೆ ಪ್ರದರ್ಶನ ಸಂಸ್ಕೃತಿಯ ಪ್ರತೀಕ

ಸಾಗರ: ಬಹು ಹಿಂದಿನಿಂದ ದಸರಾ ಗೊಂಬೆ ಉತ್ಸವ ನಡೆಸಿಕೊಂಡು ಬರುತ್ತಿದ್ದು, ಸಾಂಪ್ರದಾಯಿಕ ಆಚರಣೆ ನಮ್ಮ ಸಂಸ್ಕೃತಿ ಪ್ರತೀಕ. ಗೊಂಬೆ ಪ್ರದರ್ಶನ ಏರ್ಪಡಿಸಿ ಅದರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಮೂಲಕ ಸಂಸ್ಕೃತಿ ಆಚರಣೆ ವಿನಿಮಯ ಸಾಧ್ಯ ಎಂದು ಸ್ಮಾರ್ತ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಎಚ್.ಕೆ.ಪರಮಾತ್ಮ ಹೇಳಿದರು

ನವರಾತ್ರಿ ಅಂಗವಾಗಿ ಸಾಗರದ ಗಾಯತ್ರಿ ಮಹಿಳಾ ಮಂಡಳಿಯಿಂದ ಏರ್ಪಡಿಸಿರುವ 9 ದಿನಗಳ ಗೊಂಬೆ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಇಂತಹ ಆಚರಣೆಗಳನ್ನು ಪರಿಚಯಿಸಬೇಕು. ನವದುರ್ಗೆಯರನ್ನು ಪ್ರತಿ ದಿನ ಒಂದೊಂದು ಅವತಾರದಲ್ಲಿ ಪೂಜಿಸಲಾಗುತ್ತದೆ. ಭಕ್ತರನ್ನು ಸಂರಕ್ಷಣೆ ಮಾಡುತ್ತಾಳೆ ಎನ್ನುವ ನಂಬಿಕೆ ನಮ್ಮದು. ದಸರಾ ಸಂದರ್ಭದಲ್ಲಿ ಗೊಂಬೆ ಕೂರಿಸುವುದನ್ನು ಮೊದಲು ಮೈಸೂರು ಭಾಗದಲ್ಲಿ ಚಾಲನೆಗೆ ತರಲಾಗಿತ್ತು ಎಂದರು.

ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ಡಿ.ಕೆ.ಸರೋಜಾ ಮಾತನಾಡಿ, ಮಂಡಳಿಯು 25 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಗೊಂಬೆ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಪ್ರದರ್ಶಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು. ಸ್ಮಾರ್ತ ಬ್ರಾಹ್ಮಣ ಒಕ್ಕೂಟದ ಶ್ರೀಧರ ದೀಕ್ಷಿತ್, ಮಹಾಬಲ, ವಾಣಿ ಚಂದ್ರಶೇಖರ್, ವಿದ್ಯಾ ಸದಾಶಿವ, ಜಯಲಕ್ಷ್ಮೀ, ಇಂಧೂಮತಿ ಇತರರಿದ್ದರು.