ರೋಗಿ ಸಂಬಂಧಿಕರೇ ಫ್ಯಾನ್ ವ್ಯವಸ್ಥೆ ಮಾಡಿರುವುದು.  
ನ್ಯೂಸ್

ಜಿಲ್ಲಾ ಆಸ್ಪತ್ರೆಯೇ ರೋಗಗ್ರಸ್ತ...!!

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಮಹಾರಾಜರ ಕಾಲದಲ್ಲಿ ಸ್ಥಾಪನೆಯಾಗಿರುವ ನಗರದ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆ ಇಂದಿಗೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್​ ಅವರಿಂದ 1937ರಲ್ಲಿ ಲೋಕಾರ್ಪಣೆಗೊಂಡ ಹೆಗ್ಗಳಿಕೆ ಆಸ್ಪತ್ರೆಗಿದೆ. ಆದರೆ, ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಯಾರೊಬ್ಬರೂ ಮುಂದಾಗದಿರುವುದರಿಂದ ರೋಗಿಗಳು ಸಮಸ್ಯೆಯ ಸುಳಿಗೆ ಸಿಲುವಂತಾಗಿದೆ.

ಆರಂಭದಲ್ಲಿ 350 ಹಾಸಿಗೆ ಸಾಮರ್ಥ್ಯ ಹೊಂದಿದ್ದ ಆಸ್ಪತ್ರೆಯನ್ನು ಈಗ 500 ಹಾಸಿಗೆ ಸಾಮರ್ಥ್ಯಕ್ಕೆ ಏರಿಸಲಾಗಿದೆ. ಆ ಪೈಕಿ 5 ಹಾಸಿಗೆ ತುರ್ತು ಚಿಕಿತ್ಸೆಗೆ, 15 ಹಾಸಿಗೆಗಳಿಗೆ ಐಸಿಯು ವ್ಯವಸ್ಥೆ, ಮಹಿಳಾ ಮತ್ತು ಪುರುಷ ಸಾಮಾನ್ಯ ವಾರ್ಡ್​ಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಸೇವೆ ಮಾತ್ರ ಅಷ್ಟಕ್ಕಷ್ಟೇ ಎಂಬಂತಿದೆ.

ಮನೆಯಿಂದಲ್ಲೇ ಫ್ಯಾನ್​ ತಂದ್ರು!

ಆಸ್ಪತ್ರೆಯಲ್ಲಿ ಎಸಿ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರೋಗಿಗಳು ಪರದಾಡುತ್ತಿರುವುದನ್ನು ನೋಡಲಾರದೆ, ಸಂಬಂಧಿಕರೇ ಮನೆಯಿಂದ, ಅಂಗಡಿಗಳಿಂದ ್ಯಾನ್​ಗಳನ್ನು ತಂದಿಟ್ಟಿದ್ದಾರೆ. ವಿದ್ಯುತ್​ ಕಡಿತವಾದ ಸಂದರ್ಭದಲ್ಲಿ ಬೀಸಣಿಕೆ, ರಟ್ಟುಗಳಿಂದ ರೋಗಿಗಳಿಗೆ ಗಾಳಿ ಬೀಸುವುದನ್ನು ಕಾಣಬಹುದಾಗಿದೆ.

ತುರ್ತು ಚಿಕಿತ್ಸೆ ಇರುವವರನ್ನು ಐಸಿಯು ವಾರ್ಡ್​ನಲ್ಲಿ ದಾಖಲು ಮಾಡುತ್ತಾರೆ. ಅವರಿಗೆ ಸಮರ್ಪಕವಾಗಿ ಗಾಳಿ ವ್ಯವಸ್ಥೆಗಾಗಿ ಎಸಿಗಳನ್ನು ಅಳವಡಿಸಲಾಗಿದ್ದು, ಸೋಮವಾರ ಇದ್ದಕ್ಕಿದಂತೆ ಎಸಿ ಯಂತ್ರಗಳು ಕೈ ಕೊಟ್ಟಿವೆ. ಇದರಿಂದಾಗಿ ರೋಗಿಗಳು ಸೆಕೆಯಿಂದ ಪರದಾಡುವಂತಾಯಿತು. ಗಾಳಿ ವ್ಯವಸ್ಥೆಯಿಲ್ಲದೆ ತೀವ್ರ ಸಮಸ್ಯೆ ಎದುರಿಸಿದರು. ಕೊಠಡಿಗಳ ಗಾತ್ರಕ್ಕೆ ತಕ್ಕಂತೆ ಎಸಿ ಯಂತ್ರಗಳು ಇಲ್ಲ. ಕಾಟಾಚಾರಕ್ಕೆ ಎಸಿಗಳನ್ನು ಅಳವಡಿಸಿದ್ದು, ಅವು ಸಹ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. 15 ದಿನಗಳಿಂದ ಎಸಿ ಸಮಸ್ಯೆ ಇರುವ ಬಗ್ಗೆ ಶುಶ್ರೂಷಕಿಯರು, ಆಸ್ಪತ್ರೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು, ಜಿಲ್ಲಾ ಸರ್ಜನ್​ ಡಾ.ಜಗದೀಶ್​ ಸೇರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

* ಸಮಸ್ಯೆ ಕೇಳದ ಮೇಲಧಿಕಾರಿಗಳು

ಎಸಿ, ಸಮರ್ಪಕ ಗಾಳಿಯಿಲ್ಲದ ಕಾರಣ ರೋಗಿಗಳು ಪರದಾಡುತ್ತಿದ್ದು, ಏನಾದರು ತೊಂದರೆಯಾದರೆ ಯಾರು ಹೊಣೆ ಎಂಬ ಆತಂಕದಲ್ಲಿ ಶುಶ್ರೂಷಕಿಯರು ಇದ್ದಾರೆ. ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿಸದೆ ಇರುವುದು ಬೇಸರಕ್ಕೆ ಕಾರಣವಾಗಿತ್ತು. ಆಡಳಿತ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರು ಹೊರಗೆ ಬಂದು ಆಸ್ಪತ್ರೆ ಪರಿಸ್ಥಿತಿ ಏನು ಎಂಬುದನ್ನು ಪರಿಶೀಲನೆ ಮಾಡುವುದಿಲ್ಲ. ಹೇಳಿದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕೆಲ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

* ಸಾವು-ಬದುಕಿನ ನಡುವೆ ಹೋರಾಟ

ಎಸ್​ಎನ್​ಆರ್​ ಆಸ್ಪತ್ರೆ ಹೇಳಿಕೊಳ್ಳಲು ಅಷ್ಟೇ. ಸರ್ಕಾರಗಳು ವಿವಿಧ ಯೋಜನೆಗಳಿಂದ ಆರೋಗ್ಯ ಸುಧಾರಣೆಗೆ ಹಲವು ಕಾರ್ಯಕ್ರಮ ಜಾರಿಗೆ ತಂದರೂ, ಅನುದಾನ ಬಿಡುಗಡೆಗೊಳಿಸಿದರೂ ಅದರ ವೆಚ್ಚವನ್ನು ಕಾಗದದಲ್ಲಿ ತೋರಿಸುತ್ತಾರೆ ಹೊರತು, ಪ್ರಾಯೋಗಿಕವಾಗಿ ಆಗಿರುವುದಿಲ್ಲ. ನಾಲ್ಕು ಎಸಿಗಳು ಇದ್ದು ಯಾವುದೂ ಕೆಲಸ ಮಾಡುತ್ತಿಲ್ಲ. ಐಸಿಯು ಎಂದರೆ ತುರ್ತು ನಿಗಾ ಟಕವಾಗಿದ್ದು, ವೈದ್ಯಾಧಿಕಾರಿಗಳ ರ್ನಿಲಕ್ಷ$್ಯದಿಂದ ರೋಗಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್​...

ಎಸಿ ಸಮಸ್ಯೆ ಬಗ್ಗೆ ರಾತ್ರಿಯೇ ಗಮನಕ್ಕೆ ಬಂದಿದ್ದು, ಬೆಳಗ್ಗೆಯೇ ಟೆಕ್ನಿಷಿಯನ್​ ಕರೆಸಿ ರಿಪೇರಿ ಮಾಡಿಸಲು ಕ್ರಮವಹಿಸಲಾಗಿದೆ. ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ.

- ಡಾ.ಜಗದೀಶ್​, ಜಿಲ್ಲಾ ಸರ್ಜನ್​, ಎಸ್​ಎನ್​ಆರ್​ ಆಸ್ಪತ್ರೆ, ಕೋಲಾರ

ಕೋಟ್​...

ಇದು ಐಸಿಯು ಅಲ್ಲ, ಡೆತ್​ ವಾರ್ಡ್​, ಅವ್ಯವಸ್ಥೆ ಬಗ್ಗೆ ಡಿಎಸ್​ ಮತ್ತು ಇಂಜಿನಿಯರ್​ ಕೇಳಿದರೆ ನೀವ್ಯಾರು ಎಂದು ನಮ್ಮನ್ನೇ ಗದರುತ್ತಾರೆ. ಥೈರಾಯಿಡ್​ ಪರೀೆಗೆ ಖಾಸಗಿ ಲ್ಯಾಬ್​ಗೆ ಶಿಾರಸು ಮಾಡುವುದು ಸಾಮಾನ್ಯವಾಗಿದೆ. ಬ್ಲಡ್​ ಬ್ಯಾಂಕ್​ಗೆ ಹೋದರೆ ರಕ್ತ ಇಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿಗೆ ಬರುವವರೆಲ್ಲ ಬಡವರೆ ಆಗಿದ್ದು, ಅಧಿಕಾರಿಗಳಿಗೆ ಕಾಳಜಿಯಿಲ್ಲದಂತಾಗಿದೆ.

- ಮಂಜುಳಾ, ರೋಗಿಯ ಸಂಬಂಧಿ.