ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್​ ಅಂಬೇಡ್ಕರ್​ ಮೆಮೋರಿಯಲಿಸ್ಟ್​ ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ನರೇಗಾ ಹಬ್ಬ-2025ರ ಕಾರ್ಯಕ್ರಮದಲ್ಲಿ ಇಲಾಖೆ ಸಚಿವ ಪ್ರಿಯಾಂಕ್​ ರ್ಖಗೆ ಅವರು, ತಾಪಂ ಇಒ ಮಂಜುನಾಥ್​ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಪಂಚಾಯಿತಿ ರಾಜ್​ ಇಂಜಿನಿಯರ್​ ವಿಭಾಗದ ಕಾರ್ಯಪಾಲಕ ಅಭಿಯಾಂತರ ಕೆ.ರವೀಂದ್ರ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್​, ಮದನಹಳ್ಳಿ ಗ್ರಾಮ ಪಂಚಾಯತಿ ಅಧ್ಯೆ ರತ್ನಮ್ಮ, ಪಿಡಿಒ ಅನುರಾಧ ಇದ್ದರು. 
ನ್ಯೂಸ್

ನರೇಗಾದಡಿ ಜಿಲ್ಲೆಗೆ ಮೂರು ಪ್ರಶಸ್ತಿಗಳ ಗರಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು 2023-24ನೇ ಸಾಲಿನಲ್ಲಿ (ಎನ್​ಆರ್​ಇಜಿ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಗ್ರಾಮ ಪಂಚಾಯಿತಿ ಹಾಗೂ ಸರ್ಕಾರೇತರ ಸಂಸ್ಥೆಗೆ ರಾಜ್ಯಮಟ್ಟದ ಪುರಸ್ಕಾರ ಲಭಿಸಿದ್ದು, ಸಚಿವ ಪ್ರಿಯಾಂಕ ರ್ಖಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮಹಾತ್ಮ ಗಾಂಧಿ ನರೇಗಾ ಒಗ್ಗೂಡಿಸುವಿಕೆಯಲ್ಲಿ ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಕೋಲಾರ ಪಂಚಾಯತ್​ ರಾಜ್​ ಇಂಜಿನಿಯರ್​ ವಿಭಾಗ ಅತ್ಯುತ್ತಮ ಅನುಷ್ಠಾನ ಇಲಾಖೆ, ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರಕ್ಕೆ ತಾಲೂಕಿನ ಮದನಹಳ್ಳಿ, ಅತ್ಯುತ್ತಮ ಸರ್ಕಾರೇತ್ತರ ಸಂಸ್ಥೆ ಸ್ಥಾನಕ್ಕೆ ಎಫ್​ಇಸಿ ಸ್ಥಂಸ್ಥೆ ಭಾಜನವಾಗಿದೆ.

ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್​ ಅಂಬೇಡ್ಕರ್​ ಮೆಮೋರಿಯಲಿಸ್ಟ್​ ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ನರೇಗಾ ಹಬ್ಬ-2025ರ ಕಾರ್ಯಕ್ರಮದಲ್ಲಿ ಇಲಾಖೆ ಸಚಿವರು ಜಿಲ್ಲೆಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಯೋಜನೆಯಡಿ ಶೇ.100ರಷ್ಟು ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿದೆ. ಸಮಗ್ರ ಕೆರೆ, ರಾಜಕಾಲುವೆಗಳ, ನಮ್ಮ ಹೊಲ-ನಮ್ಮ ರಸ್ತೆ, ಸಿಸಿ ರಸ್ತೆ, ಸಿಸಿ ಚರಂಡಿ ನಿಮಾರ್ಣ ಮಾಡಿ, ಅತ್ಯತ್ತಮ ಸಾಧನೆ ಮಾಡಲಾಗಿದೆ.

* ಅತ್ತ್ತ್ಯುತ್ತಮ ಗ್ರಾಪಂ ಮದನಹಳ್ಳಿ

ಕೋಲಾರ ತಾಲೂಕು ಮದನಹಳ್ಳಿ ಗ್ರಾಮ ಪಂಚಾಯಿತಿ ಕಳೆದ ಸಾಲಿನಲ್ಲಿ ನರೇಗಾದಡಿ ಶೇ.100 ಮಾನವ ದಿನಗಳನ್ನು ಸೃಜನೆ ಮಾಡಲಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಶ್ವತ ಆಸ್ತಿ ಸೃಷ್ಟಿಸಲಾಗಿದೆ. ನರೇಗಾದಡಿ ಮಹಿಳೆಯರ ಭಾಗವಹಿಸುವಿಕೆ, ಕಾಮಗಾರಿಗಳ ಮುಕ್ತಾಯ, ಆಧಾರ್​ ಜೋಡಣೆ, ಒಂಬುಡ್ಸ್​ಮನ್​ ಮತ್ತು ಸಾಮಾಜಿಕ ಲೆಕ್ಕಪರಿ ಶೋಧನಾ ಪ್ರಕರಣಗಳ ಸಕಾಲದಲ್ಲಿ ವಸೂಲಾತಿ ಮತ್ತು ವಿಲೇವಾರಿಗೆ ಕ್ರಮವಹಿಸಲಾಗಿದೆ.

ಕೆರೆಗಳಲ್ಲಿ ಹೊಳೆತ್ತುವುದು, ಕಾಲುವೆಗಳ ಅಭಿವೃದ್ಧಿ, ಕೃಷಿಹೊಂಡ, ಬದು ನಿಮಾರ್ಣ, ರಸ್ತೆ ಕಾಮಗಾರಿಗಳು. ದನದ ಕೊಟ್ಟಿಗೆ, ಎರೆಹುಳು ಗೊಬ್ಬರ, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ನಿಮಾರ್ಣ, ಮೈದಾನ ಅಭಿವೃದ್ಧಿ, ವೈಯುಕ್ತಿಕ ಕಾಮಗಾರಿಗಳ ಅನುಷ್ಠಾನ ಪರಿಗಣಿಸಿ ಜಿಲ್ಲೆಯ ಅತ್ತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಸಂಸ್ಥೆ ಸಾಧನೆ

ನೈಸರ್ಗಿಕ ಸಂಪನ್ಮೂಲಗಳ ಕಾಮಗಾರಿಗಳ ಅನುಷ್ಠಾನದಲ್ಲಿ ವೈಜ್ಞಾನಿಕ ಕ್ರಮಗಳ ಜಾರಿ, ಜಲ ಸಂರಕ್ಷಣೆಗೆ ತೆಗೆದುಕೊಂಡ ಕ್ರಮಗಳು, ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಸಿಬ್ಬಂದಿಗೆ ತರಬೇತಿ ವಿಚಾರದಲ್ಲಿ ಎಫ್​ಇಎಸ್​ ಸಂಸ್ಥೆಯ ಕಾರ್ಯಗಳಿಗೆ ಮೆಚ್ಚಿ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗಿದೆ.