ನ್ಯೂಸ್

ದಾಳಿಗೊಳಗಾದ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ದೆಹಲಿ ಸಿಎಂ| Rekha Gupta

Rekha Gupta: ಆಗಸ್ಟ್​ 20 ರ ಬುಧವಾರದಂದು ತಮ್ಮ ನಿವಾಸದಲ್ಲಿ ದಾಳಿಗೊಳಗಾದ ನಂತರ ದೆಹಲಿ ಮುಖ್ಯಮಂತ್ರಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ದೆಹಲಿ ಬಿಜೆಪಿ ಸಂಸದರೊಂದಿಗೆ ಕುಳಿತಿರುವ ಫೋಟೋ ಇದೀಗ ವೈರಲ್​ ಆಗಿದೆ.

ಈ ಫೋಟೋದಲ್ಲಿ, ಚಾಂದನಿ ಚೌಕ್​ ಸಂಸದ ಪ್ರವೀಣ್​ ಖಂಡೇಲ್ವಾಲ್​ ಅವರ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಇನ್ನು ಇತರ ಸಂಸದರು ಗುಪ್ತಾ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದಾರೆ.

ಆಗಸ್ಟ್​ 20 ರಂದು ಗುಜುರಾತ್​ನ 41 ವರ್ಷದ ಆಟೋರಿಕ್ಷ ಚಾಲಕ ರಾಜೇಶ್​ ಭಾಯ್​ ಕಿಮ್ಜಿ ಭಾಯ್​ ಸಕರಿಯಾ ಎಂಬುವವರು ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆದ 'ಜನ್ ಸುನ್‌ವೈ' ಸಾರ್ವಜನಿಕ ಸಭೆಗೆ ಹೋಗಿದ್ದರು. ಈ ವೇಳೆ ದಾಳಿಕೋರ ಗುಪ್ತಾ ಮೇಲೆ ಕೂಗಾಡಿ, ಕಪಾಳ ಮೋಕ್ಷ ಮಾಡಿ ನಿಂದಿಸಿದ್ದಾನೆ.

ಹಿಂದಿನ ದಿನದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ಆರೋಪಿ ಸಕರಿಯಾ ಮುಖ್ಯಮಂತ್ರಿಯವರ ಶಾಲಿಮಾರ್​ ಬಾಗ್​ ನಿವಾಸದಲ್ಲಿ ಕೂತು ಆವರಣವನ್ನುಸಮೀಕ್ಷೆ ಮಾಡುತ್ತಿರುವುದು ಮತ್ತು ಸಿಸಿಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ರೆಕಾರ್ಡ್​ ಮಾಡುತ್ತಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ. (ಏಜೆನ್ಸೀಸ್​)