ದಾದಿಯರ ದಿನಾಚರಣೆಯಲ್ಲಿ ಪ್ರೊ.ಲೋಲಿಟಾ ಎಸ್.ಎಂ.ಡಿಸೋಜ, ಡಾ.ಚಂದ್ರಶೇಖರ್ ಜೆ.ಸೊರಕೆ, ಡಾ.ಜೀವರಾಜ್ ಸೊರಕೆ ಮೊದಲಾದವರಿದ್ದರು.
- ಗುಣಮಟ್ಟದ ಆರೋಗ್ಯ ಸೇವೆ
- ರೋಗಿಗಳ ಜೀವನದಲ್ಲಿ ಆಳವಾದ ಪ್ರಭಾವ ಬೀರುವ ಕರುಣೆ
ಮಂಗಳೂರು: ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಲಾಯಿತು.
ಎಸ್‌ಸಿಎಸ್ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲ ಪ್ರೊ.ಲೋಲಿಟಾ ಎಸ್.ಎಂ.ಡಿಸೋಜ ಮಾತನಾಡಿ, ನರ್ಸಿಂಗ್ ವೃತ್ತಿಯಲ್ಲಿ ರೋಗಿ ಆರೈಕೆ, ಕರುಣೆ, ಸಹಾನುಭೂತಿ, ಸಮರ್ಪಣೆ ಮತ್ತು ಪರಿಣಾಮಕಾರಿ ಸೋಂಕು ನಿಯಂತ್ರಣ ಮಹತ್ವದ್ದಾಗಿದೆ. ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ನರ್ಸ್‌ಗಳ ಸಮರ್ಪಣೆಯನ್ನು ಶ್ಲಾಘಿಸಿದರು.
ಕ್ಲಿನಿಕಲ್ ನಿರ್ದೇಶಕ ಡಾ.ಚಂದ್ರಶೇಖರ್ ಜೆ. ಸೊರಕೆ, ನಾವು ಕೃತಕ ಬುದ್ಧಿಮತ್ತೆ , ರೋಬೋಟಿಕ್ಸ್ ಮತ್ತು ತಂತ್ರಜ್ಞಾನಗಳ ಯುಗದಲ್ಲಿ ಬದುಕುತ್ತಿದ್ದರೂ, ರೋಗಿಗಳ ಜೀವನದಲ್ಲಿ ಆಳವಾದ ಪ್ರಭಾವ ಬೀರುವ ಕರುಣೆ ಮತ್ತು ಸಹಾನುಭೂತಿ ಎಂಬ ಮಾನವೀಯ ಗುಣಗಳನ್ನು ಯಂತ್ರಗಳು ಅಥವಾ ತಂತ್ರಜ್ಞಾನ ಯಾವತ್ತೂ ಬದಲಾಯಿಸಲಾರವು ಎಂದರು.
ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಜೀವರಾಜ್ ಸೊರಕೆ, ಮುಖ್ಯ ಆಡಳಿತಾಧಿಕಾರಿ ರಾಮಾ ಜೆ. ಸೊರಕೆ, ವೈದ್ಯಕೀಯ ಅಧೀಕ್ಷಕ ಡಾ. ಶಾಲಿನಿ ಎಸ್. ರಾವ್ ಹಾಗೂ ನರ್ಸಿಂಗ್ ವಿಭಾಗ ಮುಖ್ಯಸ್ಥೆ ಗ್ರೇಸಮ್ಮ ಆಂಟೋನಿ ಉಪಸ್ಥಿತರಿದ್ದರು.