ನ್ಯೂಸ್

ಕೊರೊನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 361ಕ್ಕೆ ಏರಿಕೆ: 17,205 ಜನರಲ್ಲಿ ಸೋಂಕು ಪತ್ತೆ

ವುಹಾನ್​: ಚೀನಾದಲ್ಲಿ ಕೊರೊನಾ ವೈರಸ್​ನಿಂದಾಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಇಂದು ಮುಂಜಾನೆಯ ವರದಿಯ ಪ್ರಕಾರ ಈವರೆಗೆ ಫಿಲಿಪೈನ್ಸ್​ನಲ್ಲಿ ಒಂದು ಸಾವು ಸೇರಿದಂತೆ ಮೃತಪಟ್ಟವರ ಸಂಖ್ಯೆ 361ಕ್ಕೆ ಏರಿದ್ದು, 17,205 ಜನರನ್ನು ಸೋಂಕಿತರು ಎಂದು ಗುರುತಿಸಲಾಗಿದೆ.

ಕಳೆದ 24 ಗಂಟೆಗಳೊಳಗೆ ಕೊರೊನಾ ವೈರಸ್​ನಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ 57 ಹೆಚ್ಚಳ ಕಂಡುಬಂದಿದೆ. ನಿನ್ನೆ (ಫೆ.2)ರಂದು ಚೀನಾದಿಂದ ಹೊರಗೆ ಫಿಲಿಪೈನ್ಸ್​ನಲ್ಲಿ ಕೊರೊನಾ ವೈರಸ್​ನಿಂದಾಗಿ ಮೊದಲ ಸಾವು ಸಂಭವಿಸಿರುವುದು ದಾಖಲಾಗಿದೆ.

ಚೀನಾ ಹೊರತು ಪಡಿಸಿ ಒಟ್ಟು 23 ದೇಶಗಳಲ್ಲಿ ಕೊರೊನಾ ವೈರಸ್​ ಇರುವುದು ಪತ್ತೆಯಾಗಿದೆ. ಭಾರತದ ಕೇರಳದಲ್ಲಿ ನಿನ್ನೆ ಎರಡನೇ ಕೊರನೊ ವೈರಸ್​ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್​)