ಚಟ್ನಳ್ಳಿ ಮಹೇಶ್ 
ನ್ಯೂಸ್

ನೃತ್ಯರೂಪಕ ಪ್ರದರ್ಶನ ನಾಳೆ

ಶಿವಕುಮಾರ ಎಸ್.ಪಿ.

ಚಿಕ್ಕಮಗಳೂರು: ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಭಾರತದ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನ ‘ನೀನಲ್ಲದೆ ಮತ್ಯಾರು ಇಲ್ಲವಯ್ಯ’ ಎಂಬ ನೃತ್ಯರೂಪಕವನ್ನು ನಗರದ ಕುವೆಂಪು ಕಲಾಮಂದಿರದಲ್ಲಿ ಆ.31ರ ಸಂಜೆ 6.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಶ್ರೀ ಶಿವಕುಮಾರ ಕಲಾ ಸಂಘ, ಸಮಸ್ತ ಸಾಂಸ್ಕೃತಿಕ ಸಂಘಟನೆಗಳ ಸಹಯೋಗದಲ್ಲಿ ಶ್ರೀನಿವಾಸ ಜಿ.ಕೃಷ್ಪಪ್ಪ ಪರಿಕಲ್ಪನೆಯ ಮತ್ತು ಆಯೋಜನೆಯ ನೃತ್ಯರೂಪಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈ.ಡಿ.ಬದಾಮಿ ತಂಡದ ನಿರ್ವಹಣೆ ಹಾಗೂ ಸ್ನೇಹ ಕಪ್ಪಣ್ಣ ವಸ್ತ್ರ ವಿನ್ಯಾಸ, ನೃತ್ಯ ಸಂಯೋಜಕ, ನಿರ್ದೇಶನ ಮತ್ತು ನಾಯಕಿ ಪಾತ್ರ ನಿರ್ವಹಿಸಲಿದ್ದಾರೆ. ಬಸವಕೇಂದ್ರ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಪಂ ಸಿಇಒ ಬಿ.ಗೋಪಾಲಕೃಷ್ಣ, ಎಸ್ಪಿ ಡಾ. ವಿಕ್ರಮ ಅಮಟೆ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸಾಹಿತಿಗಳಾದ ನಾಗರಾಜ ರಾವ್ ಕಲ್ಕಟ್ಟೆ, ರವೀಶ್ ಕ್ಯಾತನಬೀಡು ಇದ್ದರು.