ನ್ಯೂಸ್

ಓರಿಯನ್ ಮಾಲ್ ವಿರುದ್ಧ ಕೇಸ್

ಬೆಂಗಳೂರು: ಅಡ್ವೆಂಚರ್ ಗೇಮ್‌ನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಓರಿಯನ್ ಮಾಲ್ ವಿರುದ್ಧ ಸುಬ್ರಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಯಾಣನಗರ ನಿವಾಸಿ ಪ್ಯಾಟ್ರಿಕ್ ಕುಮಾರ್ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಓರಿಯನ್ ಮಾಲ್‌ನ ಬೌನ್ಸ್ ಐಎನ್‌ಸಿ ಟ್ರ್ಯಾಂಪೊಲೈನ್ ೆಸಿಲಿಟಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

18ರ ಮಧ್ಯಾಹ್ನ 1.30ರಲ್ಲಿ ಓರಿಯನ್ ಮಾಲ್‌ನಲ್ಲಿನ 4ನೇ ಮಹಡಿಯಲ್ಲಿ ಇರುವ ಬೌನ್ಸ್ ಐಎನ್‌ಸಿ ಟ್ರ್ಯಾಂಪೊಲೈನ್‌ನಲ್ಲಿ ನನ್ನ ಪುತ್ರ ಮಾರ್ಕ್ ನಿರಂಜನ್ (16) ಆಟವಾಡುತ್ತಿದ್ದಾಗ ಬಿದ್ದು ಕಾಲು ಮುರಿದುಕೊಂಡಿದ್ದ. ಆದರೆ, ಪ್ರಥಮ ಚಿಕಿತ್ಸೆ ಕೊಡಲು ಯಾವುದೇ ಸೌಲಭ್ಯ ಇರಲಿಲ್ಲ.

ಘಟನೆ ನಡೆದು 45 ನಿಮಿಷದ ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು. ದೊಡ್ಡ ಮಾಲ್‌ನಲ್ಲಿ ಆಂಬುಲೆನ್ಸ್ ಸೌಲಭ್ಯ, ಪ್ರಥಮ ಚಿಕಿತ್ಸೆ ನೀಡಲು ಸಿಬ್ಬಂದಿ ಮತ್ತು ಔಷಧ ಸೌಲಭ್ಯ ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.