ನಂಜನಗೂಡು: ಬ್ರೇಕ್ ವಿಫಲಗೊಂಡು ಸಾರಿಗೆ ಬಸ್ ಜಮೀನಿಗೆ ನುಗ್ಗಿದ್ದ ಘಟನೆ ದೇವರಾಜಶೆಟ್ಟಿ ಗ್ರಾಮದ ಬಳಿ ನಡೆದಿದೆ.
ಮಂಗಳವಾರ ಬೇಗೂರಿನಿಂದ ನಂಜನಗೂಡಿನ ಕೊತ್ತನಹಳ್ಳಿ ಗ್ರಾಮದ ಮಾರ್ಗವಾಗಿ ಹೆಚ್.ಡಿ.ಕೋಟೆಗೆ ತೆರಳುತ್ತಿದ್ದ ಸಂದರ್ಭ ಬಸ್‌ನ ಬ್ರೇಕ್ ವಿಫಲಗೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಬಸ್‌ನಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.