ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿಯೋಜನೆಯಿಂದ ನಷ್ಟಕ್ಕೊಳಗಾಗಿರುವ ಖಾಸಗಿ ಸಾರಿಗೆ ಚಾಲಕರು-ಮಾಲೀಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೆ.೧೧ ರಂದು ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಹೀಗಾಗಿ ಭಾನುವಾರ ರಾತ್ರಿಯಿಂದಲೇ ಜನರಿಗೆ ಬಂದ್ ಬಿಸಿ ತಟ್ಟಲಿದೆ.
ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಂದ್ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದ್ದು. ಬೈಕ್ ಟ್ಯಾಕ್ಸಿ ನಿರ್ಬಂಧ, ಚಾಲಕರಿಗೆ ಸಹಾಯಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೆ.೧೧ರಂದು ಸೋಮವಾರ ಬೆಂಗಳೂರು ಬಂದ್‌ಗೆ ಕರೆಕೊಟ್ಟಿದೆ. ಭಾನುವಾರ ಮಧ್ಯ ರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತವಾಗುವ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ಬಂದ್‌ಗೆ ೩೦ಕ್ಕೂ ಹೆಚ್ಚು ಸಂಘಟನೆಳು ಬೆಂಬಲ ನೀಡಿವೆ. ಇದರಿಂದ ಭಾನುವಾರ ರಾತ್ರಿಯಿಂದಲೇ ರಾಜಧಾನಿ ಸ್ತಬ್ಧವಾಗುವ ಸಾಧ್ಯತೆ ಇದೆ. ಹೀಗಾಗಿ ಖಾಸಗಿ ವಾಹನ ಪ್ರಯಾಣಿಕರು ಬಸ್ ನೋಡಿ ಪ್ರಯಾಣಕ್ಕೆ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಪರದಾಡಬೇಕಾದ ಸ್ಥಿತಿ ಎದುರಾಗಬಹುದು.
ಇನ್ನು ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ನಗರದಲ್ಲಿ ೩ ಲಕ್ಷ ಆಟೋ, ೧.೫ ಲಕ್ಷ ಟ್ಯಾಕ್ಸಿ, ೨೦ ಸಾವಿರ ಗೂಡ್ಸ್ ವಾಹನಗಳು, ೫ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, ೮೦ ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೋರೆಟ್ ಕಂಪನಿ ಬಸ್‌ಗಳು ಬಂದ್ ಆಗಲಿದ್ದು ಸಿಲಿಕಾನ್ ಸಿಟಿ ಜನರಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆಗಳಿವೆ.
ಯಾವ ವಾಹನಗಳು ರಸ್ತೆಗಿಳಿಯಲ್ಲ?
ಆಟೋಗಳು
ಕಂಪನಿ ಕ್ಯಾಬ್‌ಗಳು
ಏರ್‌ಪೋರ್ಟ್ ಕ್ಯಾಬ್‌ಗಳು
ಸ್ಕೂಲ್ ಬಸ್‌ಗಳು
ಖಾಸಗಿ ಬಸ್‌ಗಳು
ಯಾವ ವಾಹನಗಳು ಇರುತ್ತೆ?
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್, ನಮ್ಮ ಮೆಟ್ರೋ, ಬೈಕ್ ಟ್ಯಾಕ್ಸಿ