ನ್ಯೂಸ್

2023ರಲ್ಲಿ ಈ ವರ್ಗದ ಮ್ಯೂಚುವಲ್ ಫಂಡ್​ಗಳಲ್ಲಿ ದೊರೆತ ಸರಾಸರಿ ಗಳಿಕೆ ಶೇಕಡಾ 32.23; ಮುಂದಿನ ವರ್ಷವೂ ಇದೇ ರೀತಿ ಲಾಭ ಸಿಗುವುದೇ?

ಮುಂಬೈ: ಅನೇಕ ಮ್ಯೂಚುವಲ್ ಫಂಡ್​ಗಳ ಹೂಡಿಕೆದಾರರು ಮಿಡ್ ಕ್ಯಾಪ್ ವಿಭಾಗದಲ್ಲಿನ ಮೌಲ್ಯಮಾಪನಗಳ ಬಗ್ಗೆ ಚಿಂತಿತರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಮಿಡ್ ಕ್ಯಾಪ್ ಷೇರುಗಳು ನಿರಂತರವಾಗಿ ಏರಿಕೆ ಕಂಡಿವೆ. ಹೀಗಾಗಿ, ಮಿಡ್ ಕ್ಯಾಪ್ ಫಂಡ್‌ ಹೂಡಿಕೆದಾರರು ತಮ್ಮ ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ಗಳಿಸಿದ್ದಾರೆ. ಮಿಡ್ ಕ್ಯಾಪ್ ಫಂಡ್‌ಗಳು 2023ರಲ್ಲಿ ಸರಾಸರಿ ಶೇಕಡಾ 32.23ರಷ್ಟು ಭರ್ಜರಿ ಆದಾಯವನ್ನು ಹೂಡಿಕೆದಾರರಿಗೆ ನೀಡಿರುವುದು ಗಮನಾರ್ಹವಾಗಿದೆ.

ಮುಂದಿನ ವರ್ಷವೂ ಇದೇ ರೀತಿಯ ಲಾಭವನ್ನು ಮಿಡ್​ ಕ್ಯಾಪ್​ ಫಂಡ್​ಗಳು ಇದೇ ರೀತಿಯ ಲಾಭ ನೀಡುತ್ತವೆಯೇ?

ಈ ಪ್ರಶ್ನೆಗೆ ಉತ್ತರಿಸುವ ಮೊದಲು ಕೆಲವೊಂದು ಮೂಲಭೂತ ಅಂಶಗಳತ್ತ ಗಮನಹರಿಸೋಣ.

ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್​ಗಳ ಯೋಜನೆಗಳು ಮಿಡ್ ಕ್ಯಾಪ್ ಸ್ಟಾಕ್‌ಗಳಲ್ಲಿ, ಅಂದರೆ ಮಧ್ಯಮ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಸೆಬಿ (ಭಾರತೀಯ ಷೇರು ವಿನಿಮಯ ಮಂಡಳಿ) ಪ್ರಕಾರ ಮಾನದಂಡಗಳ ಪ್ರಕಾರ, ಮಾರುಕಟ್ಟೆ ಬಂಡವಾಳೀಕರಣದಲ್ಲಿ 101 ಮತ್ತು 250 ರ ನಡುವಿನ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಮಿಡ್ ಕ್ಯಾಪ್ ಫಂಡ್​ ಯೋಜನೆಗಳಿಗೆ ಕಡ್ಡಾಯಗೊಳಿಸಲಾಗಿದೆ. ಅಂದರೆ, ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಹಾಗೂ ಬಂಡವಾಳ ಮೊತ್ತದಲ್ಲಿ 101 ಮತ್ತು 250ರ ನಡುವೆ ಇರುವ ಮಧ್ಯಮ ಗಾತ್ರದ ಕಂಪನಿಗಳಲ್ಲಿ ಈ ಫಂಡ್​ಗಳು ಹೂಡಿಕೆ ಮಾಡಬೇಕು. ಹೀಗಾಗಿಯೇ ಇದಕ್ಕೆ ಮಿಡ್​ ಕ್ಯಾಪ್​ ಫಂಡ್​ ಎನ್ನಲಾಗುತ್ತದೆ.

ಇನ್ನು ಮಿಡ್​ ಕ್ಯಾಪ್​ ಕಂಪನಿಗಳು ನಾಳಿನ ನಾಯಕರಾಗಬಹುದು. ಅಂದರೆ, ಮಿಡ್​ ಕ್ಯಾಪ್​ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಲಾರ್ಜ್ ಕ್ಯಾಪ್​ ಕಂಪನಿಗಳ ಮಟ್ಟವನ್ನು ತಲುಪಬಹುದು. ಅಂದರೆ, ಮಧ್ಯಮ ಗಾತ್ರದ ಕಂಪನಿಗಳು ಬೃಹತ್ ಗಾತ್ರದ ಕಂಪನಿಗಳಾಗಿ ಬೆಳವಣಿಗೆ ಹೊಂದುವುದು.

ಈ ಕಂಪನಿಗಳು ಭರವಸೆಯಂತೆ ಪ್ರದರ್ಶನ ನೀಡಿದರೆ, ಹೂಡಿಕೆದಾರರಿಗೆ ಉತ್ತಮ ಪ್ರತಿಫಲ ನೀಡುತ್ತದೆ. ಕಂಪನಿಗಳು ತಮ್ಮ ಭರವಸೆಗಳನ್ನು ಪೂರೈಸದಿದ್ದಾಗ ಏನಾಗುತ್ತದೆ? ಮಾರುಕಟ್ಟೆಯು ಇಂತಹ ಕಂಪನಿಗಳನ್ನು ಶಿಕ್ಷಿಸುತ್ತದೆ. ಅಲ್ಲದೆ, ಇವುಗಳಲ್ಲಿ ಕೆಲ ಕಂಪನಿಗಳಲ್ಲಿ ಉತ್ತಮ,ಮ್ಯಾನೇಜ್​ಮೆಂಟ್​ ಇರುವುದಿಲ್ಲ. ವಾಸ್ತವವಾಗಿ, ಅನೇಕ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಆಡಳಿತ ನಿರ್ವಹಣೆಯು ಸಾಕಷ್ಟು ಸಮಸ್ಯೆ ವಿಷಯವಾಗಿರುತ್ತದೆ.

ಈ ರೀತಿಯಾದರೆ ಮಿಡ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. ಮ್ಯೂಚುಯಲ್ ಫಂಡ್ ಹೂಡಿಕೆದಾರರಾಗಿಯೂ ಸಹ, ಮಿಡ್ ಕ್ಯಾಪ್​ನಲ್ಲಿ ಹೂಡಿಕೆ ಮಾಡುವಾಗ ಈ ಅಂಶಗಳನ್ನು ನೀವು ಕಡೆಗಣಿಸಬಾರದು.

ನಿಮಗೆ ರಿಸ್ಕ್​ ತೆಗೆದುಕೊಳ್ಳುವ ಹಾಗೂ ತಡೆದುಕೊಳ್ಳುವ ಸಾಮರ್ಥ್ಯವಿದ್ದರೆ ಮಾತ್ರ ಮಿಡ್​ ಕ್ಯಾಪ್​ ಫಂಡ್​ ಯೋಜನೆಗಳಲ್ಲಿ ಹೂಡಿಕೆ ಹೂಡಿಕೆ ಮಾಡಬೇಕು. ನೀವು 7ರಿಂದ 10 ವರ್ಷಗಳ ದೀರ್ಘ ಹೂಡಿಕೆಯ ಅವಧಿ ಹೊಂದಿರುವುದು ಉತ್ತಮ. ದೀರ್ಘ ಅವಧಿಯ ಹೂಡಿಕೆಯು ಮಾರುಕಟ್ಟೆ ಚಂಚಲತೆಯನ್ನು ಉತ್ತಮವಾಗಿ ಸಾಗಲು ಸಹಾಯ ಮಾಡುತ್ತದೆ.

ಈಗ ಮಿಡ್​ ಕ್ಯಾಪ್​ ಮೌಲ್ಯಮಾಪನಗಳು ಉತ್ತುಂಗಕ್ಕೇರಿವೆ. ಆದ್ದರಿಂದ, ಹೂಡಿಕೆದಾರರು ತ್ವರಿತ ಲಾಭಕ್ಕಾಗಿ ನೋಡಬಾರದು. ಈಗ ಬಹಳ ಎಚ್ಚರಿಕೆಯ ಸಮಯ. ನಿಮ್ಮ ನಿಯಮಿತ ಹೂಡಿಕೆಗಳೊಂದಿಗೆ ಮುಂದುವರಿಯಿರಿ. ಆದರೂ, ಕೆಲವು ಚಂಚಲತೆ ಮತ್ತು ಅಲ್ಪಾವಧಿಯ ನಷ್ಟಗಳಿಗೆ ಸಿದ್ಧರಾಗಿರಿ.

ನೀವು ನಿಯಮಿತವಾಗಿ ಹಾಗೂ ಮಾರುಕಟ್ಟೆ ಏರಿಳಿತಗಳನ್ನು ಗಮನಿಸಿ ಹೂಡಿಕೆ ಮಾಡಿದರೆ, 2024ರಲ್ಲಿಯೂ ಮಿಡ್ ಕ್ಯಾಪ್ ಮ್ಯೂಚುವಲ್‌ ಫಂಡ್‌ಗಳು ಲಾಭ ತಂದುಕೊಡುವುದು ನಿಶ್ಚಿತ.

ಕಳೆದ ಒಂದು ವರ್ಷದಲ್ಲಿ ಪ್ರಮುಖ ಮಿಡ್​ ಕ್ಯಾಪ್​ ಫಂಡ್​ಗಳು ಗಳಿಸಿದ ಲಾಭಗಳ ವಿವರ ಇಲ್ಲಿದೆ.

ಜೆಎಂ ಮಿಡ್​ ಕ್ಯಾಪ್​ ಫಂಡ್​ 45.65%

ನಿಪ್ಪಾನ್​ ಇಂಡಿಯಾ ಮಿಡ್​ ಕ್ಯಾಪ್​ ಫಂಡ್​ 44.04%

ಮಹೀಂದ್ರಾ ಮೆನುಲೈಫ್​ ಮಿಡ್​ ಕ್ಯಾಪ್​ ಫಂಡ್​ 43.52%

ಎಚ್​ಡಿಎಫ್​ಸಿ ಮಿಡ್​ ಕ್ಯಾಪ್​ ಫಂಡ್​ 42.07%

ವೈಟ್​ ಓಕ್​ ಮಿಡ್​ ಕ್ಯಾಪ್​ ಫಂಡ್​ 40.99%

ಐಟಿಐ ಮಿಡ್​ ಕ್ಯಾಪ್​ ಫಂಡ್​ 39.90

ಮೋತಿಲಾಲ್​ ಓಸ್ವಾಲ್​ ಮಿಡ್​ ಕ್ಯಾಪ್​ ಫಂಡ್​ 39.60%

ಐಸಿಐಸಿಐ ಪ್ರುಡೆನ್ಶಿಯಲ್​ ಮಿಡ್​ ಕ್ಯಾಪ್​ ಫಂಡ್​ 39.18%

ಟಾಟಾ ಮಿಡ್​ಕ್ಯಾಪ್​ ಮಿಡ್​ ಕ್ಯಾಪ್​ ಫಂಡ್​ 38.64%

ಬಂಧನ ಮಿಡ್​ ಕ್ಯಾಪ್​ ಫಂಡ್​ 37.05%

ಸುಂದರಂ ಮಿಡ್​ ಕ್ಯಾಪ್​ ಫಂಡ್​ 36.62

ಆದಿತ್ಯ ಬಿರ್ಲಾ ಸನ್​ ಲೈಫ್​ ಮಿಡ್​ ಕ್ಯಾಪ್​ ಫಂಡ್​ 35.20%

ಕ್ವಾಂಟ್​ ಮಿಡ್​ ಕ್ಯಾಪ್​ ಫಂಡ್​ 34.86%

ಡಿಎಸ್​ಪಿ ಮಿಡ್​ ಕ್ಯಾಪ್​ ಫಂಡ್​ 34.85%