ಎಸ್.ಜಿ.ನಂಜಯ್ಯನಮಠ 
ನ್ಯೂಸ್

ಆಡಿಯೋ ಅರ್ಧ ಸತ್ಯ ಅರ್ಧ ಸುಳ್ಳು ಸೃಷ್ಟಿ

ಬಿರುಗಾಳಿ ಎಬ್ಬಿಸಿರುವ ವೈರಲ್ ಆಗಿರುವ ಆಡಿಯೋದಲ್ಲಿ ಇರುವುದು ಅರ್ಧ ಸತ್ಯ ಹಾಗೂ ಅರ್ಧ ಸುಳ್ಳು ಸೃಷ್ಟಿಸಲಾಗಿದೆ. ಅದನ್ನು ಯಾರು ಮಾಡಿದ್ದಾರೆ? ಮತ್ತು ಆಡಿಯೋ ವೈರಲ್ ಮಾಡಿದ್ದ್ಯಾರು? ಈ ಬಗ್ಗೆ ತನಿಖೆ ನಡೆಯಲಿ ಎಂದು ಕಾಂಗ್ರೆಸ್ ಪಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮತ್ತು ಆರ್.ಬಿ.ತಿಮ್ಮಾಪುರ ಮಾತನಾಡಿರುವುದು ನಿಜ. ಆದರೆ, ಅದರಲ್ಲಿ ಅರ್ಧದಷ್ಟು ವಿಷಯವನ್ನು ಸೃಷ್ಟಿಸಿ ಎಡಿಟ್ ಮಾಡಿರುವ ಸಂಶಯ ಇದೆ. ಮಾತನಾಡಿದ ಕೆಲವೇ ಹೊತ್ತಿನಲ್ಲಿ ವೈರಲ್ ಹೇಗಾಯಿತು? ಈ ಬಗ್ಗೆ ಗೃಹಮಂತ್ರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗಳ ಗಮನಕ್ಕೆ ತರುವೆ ಎಂದರು.
ನನ್ನ ವಾಹನದಲ್ಲಿ ನಾನು ಮತ್ತು ನನ್ನ ಚಾಲಕ ಮಾತ್ರ ಇದ್ದೇವು. ನನಗೆ ಮೊಬೈಲ್ ತಾಂತ್ರಿಕ ವಿಚಾರಗಳು ಗೊತ್ತಿಲ್ಲ. ವೇಣುಗೋಪಾಲ ಅವರ ಬಗ್ಗೆ, ಶೇ. ೭೦ ರಿಂದ ೮೦ ಪೇಮೆಂಟ್ ಇಂಥ ಯಾವ ಮಾತನ್ನು ನಾನು ಆಡಿಲ್ಲ. ಈ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿಯವರು ಕೈವಾಡವೇನಾದರೂ ಇದೆಯಾ? ದುಡ್ಡುಕೊಟ್ಟು ವೈರಲ್ ಮಾಡಿಸಿದ್ದಾರಾ ಎಂದು ಪ್ರಶ್ನಿಸಿದರು.
ಸ್ವಾಭಿಮಾನಕ್ಕೆ ದಕ್ಕೆ :
೨೦೦೮ರಲ್ಲಿ ನಾನು ಹುನಗುಂದ ಕ್ಷೇತ್ರದಲ್ಲಿ ಕಾಶಪ್ಪನವರ ಪರವಾಗಿ ಕೆಲಸ ಮಾಡಿಲ್ಲ ಎನ್ನುವುದು ಸತ್ಯ. ಅದನ್ನು ನಾನೇ ಪುಸ್ತಕದಲ್ಲಿ ಬರೆದಿದ್ದೇನೆ. ಕಾರಣ ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಆದಾಗ ನನ್ನ ಕ್ಷೇತ್ರದ ಅನೇಕ ಗ್ರಾಮಗಳು ಹುನಗುಂದ ಕ್ಷೇತ್ರಕ್ಕೆ ಸರ‍್ಪಡೆ ಆಗಿದ್ದವು. ಹೀಗಾಗಿ ನಾನು ಹುನಗುಂದ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಆದರೆ, ಆಗ ವಿಜಯಾನಂದ ಕಾಶಪ್ಪನವರ ಅವರು ನಮ್ಮ ಮುಖಂಡರ ಎದುರು ಹುನಗುಂದ ಕ್ಷೇತ್ರಕ್ಕೆ ನಂಜಯ್ಯನಮಠ ಅವರಿಗೆ ಏನು ಸಂಬAಧ? ಅವರು ಯಾರು? ಎಂದು ನನ್ನ ಪ್ರಶ್ನಿಸಿ, ನನ್ನ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದರು. ಹುನಗುಂದ ಕ್ಷೇತ್ರದಲ್ಲಿ ನನ್ನ ತಂದೆ ನಾಲ್ಕು ಸಲ ಸ್ಪರ್ಧೆ ಮಾಡಿದ್ದರು. ಅಲ್ಲಿಂದಲೇ ಶಾಸಕರಾಗಿದ್ದರು. ನಾನು ೧ ರಿಂದ ೮ನೇ ತರಗತಿ ಅಲ್ಲಿಯೇ ಓದಿದ್ದೇನೆ. ಇದಕ್ಕಿಂತ ನನಗೆ ಹುನಗುಂದ ಸಂಬAಧ ಬೇಕಾ? ಕಾಶಪ್ಪನವರ ಮಾತಿನಿಂದ ಬೇಸರವಾಗಿ ೨೦೦೮ರ ಚುನಾವಣೆಯಲ್ಲಿ ಹೋಗಿರಲಿಲ್ಲ. ಆದರೆ, ೨೦೧೩, ೨೦೧೮, ೨೦೨೩ರ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಬೇಕಿದ್ದರೆ ಇದನ್ನು ಯಾವ ದೇವರ ಮುಂದೆಯಾದರೂ ಪ್ರಮಾಣ ಮಾಡಲು ನಾನು ಸಿದ್ಧ ಎಂದರು.
ಹೈಕಮಾಂಡ್ ಕೇಳಿಲ್ಲ:
ಕಾಶಪ್ಪನವರ ಅವರಿಗೆ ಉಸ್ತುವಾರಿ ತಪ್ಪಿಸಲು ನಾನ್ಯಾರು? ನಾನು ಶಾಸಕನೂ ಅಲ್ಲ, ಪರಿಷತ್ ಸದಸ್ಯನೂ ಅಲ್ಲ. ಪಕ್ಷದ ಕಾರ್ಯಕರ್ತ ಮಾತ್ರ. ಜಿಲ್ಲೆಯಲ್ಲಿ ಅವರೊಬ್ಬರೆ ಸಚಿವರಾಗಿದ್ದಾರೆ. ಅವರೇ ಜಿಲ್ಲಾ ಉಸ್ತುವಾರಿ ಆಗುತ್ತಾರೆ. ಅದನ್ನು ನಾನು ಪ್ರೀತಿ, ವಿಶ್ವಾಸದಿಂದಲೇ ಸ್ವಾಗತಿಸುವೆ. ಏನೇ ಆದರೂ ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವೆ. ನನ್ನ ತಂದೆ, ನಾನು ಶಾಸಕರಾಗಿದ್ದು ಕಾಂಗ್ರೆಸ್‌ನಿAದ. ನಾನು ಐದು ಸಲ ಬೋಡ್ ಚೇರಮನ್ ಆಗಿದ್ದು, ಯುವ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತನಾಗಿ ಇರುವೆ ಎಂದರು.
ನನ್ನದು ಪೆನ್ಶನ್‌ನಲ್ಲಿ ಜೀವನ :
ನನ್ನದು ಮರಳು ಮಾಫಿಯಾ ಇಲ್ಲ, ಕಲ್ಲು ಕ್ವಾರಿಗಳನ್ನು ಹೊಂದಿಲ್ಲ. ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲ್ಲ. ಯಾವುದೇ ವ್ಯವಹಾರಗಳು ಹೊಂದಿಲ್ಲ. ನನಗೆ ಪೆನ್ಶನ್ ಬರುತ್ತದೆ. ಅದರಲ್ಲಿ ಜೀವನ ನಡೆಯುತ್ತದೆ. ನನ್ನ ಬಳಿಕ ಇರುವುದು ನಾಲ್ಕು ಅಂಗಿ, ನಾಲ್ಕು ಜಾಕೇಟ್‌ಗಳು ಮಾತ್ರ ಎಂದು ತಮ್ಮ ವಿರುದ್ಧ ಕ್ರಮದ ಬಗ್ಗೆ ಪ್ರಶ್ನಿಸಿದಾಗ ಹೀಗೆ ಮಾರ್ಮಿಕವಾಗಿ ಉತ್ತರಿಸಿದರು.