ನ್ಯೂಸ್

ಅಮೆರಿಕದ ಕನಸು ಕದಿದ್ದೆ: ಭಾರತದ ವಿರುದ್ಧ ಹೊಸ ಆರೋಪ ಮಾಡಿದ ಟ್ರಂಪ್ ಸರ್ಕಾರ! |American

ನವದೆಹಲಿ: ಅಮೆರಿಕ(American) ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಡಳಿತದ ಕಾರ್ಮಿಕ ಇಲಾಖೆಯು ಹೊಸದೊಂದು ಜಾಹೀರಾತು ಬಿಡುಗಡೆ ಮಾಡಿದೆ. ಅದರಲ್ಲಿ H-B1 ವೀಸಾ ಕಾರ್ಯಕ್ರಮವನ್ನು ಕಂಪನಿಗಳು ದುರುಪಯೋಗಪಡಿಸಿಕೊಂಡಿದ್ದು, ಅದರಲ್ಲಿ ಭಾರತದ ಪಾಲು ದೊಡ್ಡದಿದೆ ಎಂದು ನೇರವಾಗಿ ಆರೋಪ ಮಾಡಿದೆ.

ಯುವ ಅಮೆರಿಕನ್ ಕಾರ್ಮಿಕರನ್ನು ವಿದೇಶಿ ನೇಮಕಾತಿಗಳೊಂದಿಗೆ ಬದಲಾಯಿಸುತ್ತಿವೆ ಎಂದು ಆರೋಪಿಸಿ, ಭಾರತವು ಈ ವ್ಯವಸ್ಥೆಯ ಅತಿದೊಡ್ಡ ಫಲಾನುಭವಿಗಳೆಂದು ಎತ್ತಿ ತೋರಿಸಿದೆ.

ಪೋಸ್ಟ್​​ನಲ್ಲೇನಿದೆ?

H-B1 ವೀಸಾದ ಅತಿಯಾದ ದುರಪಯೋಗದಿಂದಾಗಿ ವಿದೇಶಿ ಕೆಲಸಗಾರರು ಉದ್ಯೋಗಗಳನ್ನು ಬದಲಾಯಿಸುವುದರಿಂದ ಯುವ ಅಮೆರಿಕನ್ನರ ಮತ್ತು ಅಮೆರಿಕದ ಕನಸನ್ನು ಅವರು ಕದಿದ್ದಾರೆ ಎಂದು ಇಲಾಖೆ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

"ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಮತ್ತು ಕಾರ್ಯದರ್ಶಿ ಲೋರಿ ಚಾವೆಜ್-ಡಿರೆಮರ್ ನಾಯಕತ್ವದಲ್ಲಿ, ನಾವು ಕಂಪನಿಗಳನ್ನು ಅವುಗಳ ದುರುಪಯೋಗಕ್ಕೆ ಹೊಣೆಗಾರರನ್ನಾಗಿ ಮಾಡುತ್ತಿದ್ದೇವೆ. ಇದೀಗಅಮೆರಿಕನ್ ಜನರಿಗೆ ಅಮೇರಿಕನ್ ಕನಸನ್ನು ಮರಳಿ ಪಡೆಯುತ್ತಿದ್ದೇವೆ" ಎಂದು ಪೋಸ್ಟ್ ಸೇರಿಸಲಾಗಿದೆ.

51 ಸೆಕೆಂಡ್​ ವಿಡಿಯೋ

ಪೋಸ್ಟ್​ನಲ್ಲಿರುವ 51 ಸೆಕೆಂಡ್​ ವಿಡಿಯೋದಲ್ಲಿ 1950ರ ದಶಕದ ಅಮೇರಿಕನ್ ಡ್ರೀಮ್‌ನ ದೃಶ್ಯಗಳನ್ನು ತೋರಿಸಲಾಗುತ್ತಿದೆ. ಅಲ್ಲದೆ, ಅದರಲ್ಲಿ H-1B ವೀಸಾ ಅನುಮೋದನೆಗಳಲ್ಲಿ ಶೇಕಡಾ 72 ರಷ್ಟು ಭಾರತೀಯರಿಗೆ ಹೋಗುತ್ತದೆ ಎಂದು ಅದು ಹೇಳುತ್ತದೆ. ಅಮೆರಿಕದ ನೇಮಕಾತಿಗೆ ಆದ್ಯತೆ ನೀಡಿದ್ದಕ್ಕಾಗಿ ಅಧ್ಯಕ್ಷ ಟ್ರಂಪ್ ಮತ್ತು ಕಾರ್ಮಿಕ ಕಾರ್ಯದರ್ಶಿ ಲೋರಿ ಚಾವೆಜ್-ಡಿರೆಮರ್ ಅವರಿಗೆ ಸಲ್ಲುತ್ತದೆ ಎಂದು ತೋರಿಸಲಾಗಿದೆ.(ಏಜೆನ್ಸೀಸ್​)