ನ್ಯೂಸ್

ಚುನಾವಣೆಯಲ್ಲಿ ಹಣ ಹಂಚಿಕೆ ಆರೋಪ ನಿರಾಧಾರ: ಡಾ.ಜಿ. ಪರಮೇಶ್ವರ

ಬೆಂಗಳೂರು: ಚುನಾವಣೆಯಲ್ಲಿ ಕೈ ನಾಯಕರು ಹಣ ಹಂಚಿಕೆ ಆರೋಪ ನಿರಾಧಾರ(baseless allegation).  ರಾಜಕೀಯ ಕಾರಣಕ್ಕೆ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತರಾಟೆ ತೆಗೆದುಕೊಂಡರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿ ಆರೋಪ ಸತ್ಯಕ್ಕೆ ದೂರವಾದ ಮಾತು. ಹಾಗಾಗಿಯೇ ಚುನಾವಣಾ ಆಯೋಗ ನಿರ್ಲಕ್ಷ್ಯ ಮಾಡಿದೆ. ಏನಾದರೂ ಆಗಿದ್ದರೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕಲ್ಲವೆ? ಎಂದು ಪ್ರಶ್ನಿಸಿದರು.

ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಚುನಾವಣಾ ಅಯೋಗವೇ ಕ್ರಮ ಜರುಗಿಸಬೇಕು. ಬೇರೆ ಯಾರೂ ಕ್ರಮ ಜರುಗಿಸಲು ಆಗುವುದಿಲ್ಲ. ಏನಾದರೂ. ತಪ್ಪು ಆಗಿದ್ದರೆ ಚುನಾವಣಾ ಅಯೋಗ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಸಿಎಂಗೆ ಇಡಿ ಏನು ನೋಟಿಸ್ ಕೊಟ್ಟಿಲ್ಲ. ಕೊಟ್ಟರೆ ಹೊರಗಡೆ ಬರುತ್ತದೆ ಅಲ್ಲವೆ? ಎಂದು ಕೇಳಿದರು. ಜಮೀರ್ ವಿರುದ್ಧ ಎಐಸಿಸಿಗೆ ದೂರು ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಗೊತ್ತಿಲ್ಲದೇ ಏನು ಹೇಳಲು ಆಗುವುದಿಲ್ಲ. ರೈತರಿಗೆ ಕೊಟ್ಟ ನೋಟಿಸ್ ವಾಪಸ್ ತಗೆದುಕೊಳ್ಳಲು ಸಿಎಂ ಹೇಳಿದ್ದಾರೆ.

ಆ ವಿಚಾರ ಮಾತ್ರವೇ ನನಗೆ ಗೊತ್ತು. ಅದಕ್ಕೆ ಮಾತ್ರ ನಾನು ಸೀಮಿತ ಎಂದು ಪ್ರತಿಕ್ರಿಯಿಸಿದರು. ಬಿಜೆಪಿ ಸಂಸದನ ಮೇಲೆ ಎ್ಐಆರ್ ವಿಚಾರವಾಗಿ, ಇದೊಂದು ಅಭ್ಯಾಸ ಆಗಿಬಿಟ್ಟಿದೆ

2 ವರ್ಷ ಹಿಂದೆ ಆಗಿರುವುದನ್ನು ಪೋಸ್ಟ್ ಮಾಡಿದ್ದಾರೆ. ಕೆಲವು ಹೊರದೇಶದಲ್ಲಿ ಆಗಿರುವ ಘಟನೆಗಳನ್ನು ಟ್ವಿಟರ್, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದು ಡಾ.ಪರಮೇಶ್ವರ ಹೇಳಿದರು.

ಜಯನಗರ ಎಂಎಲ್‌ಗೆ ತಗ್ಗಿ ಬಗ್ಗಿ ನಡೆಯಬೇಕೆಂಬ ಡಿಸಿಎಂ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅದಕ್ಕೆ ನಾನೇನು ರಿಯಾಕ್ಟ್ ಮಾಡುವುದಿಲ್ಲ. ಅವರ ಅಭಿಪ್ರಾಯ ಹೇಳಿರುತ್ತಾರೆ. ಸಮಸ್ಯೆ ಏನಿದೆ ಮಾತನಾಡೋಣ. ನಮ್ಮ ನಾಯಕರು ಕೊಡುವ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲು ಆಗುವುದಿಲ್ಲ.

-ಡಾ.ಪರಮೇಶ್ವರ, ಗೃಹ ಸಚಿವ