ನ್ಯೂಸ್

ಆ. 9 ರಿಂದ ಏಷ್ಯಾ ಜ್ಯುವೆಲ್ಸ್ ಶೋ 2024 ಆಭರಣ ಪ್ರದರ್ಶನ,ಮಾರಾಟ : ಪ್ರತಿಷ್ಠಿತ ಆಭರಣ ತಯಾರಿಕಾ ಸಂಸ್ಥೆಗಳು ಒಂದೇ ಸೂರಿನಡಿ ಲಭ್ಯ.

ಬೆಂಗಳೂರು: ಏಷ್ಯಾ ಜ್ಯುವೆಲರ್ಸ್‌ ಸಂಸ್ಥೆ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 9ರಿಂದ 3 ದಿಗನಳ ಕಾಲ ದಕ್ಷಿಣ ಭಾರತದ ’ಏಷ್ಯಾ ಜ್ಯುವೆಲ್ಸ್ ಶೋ 2024’ ಉನ್ನತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಂಡಿದೆ.

50ನೇ ವರ್ಷದ ಏಷ್ಯಾ ಜ್ಯುವೆಲ್ಸ್ ಶೋ ಇದಾಗಿದೆ.ನಗರದ ರೆಸಿಡೆನ್ಸಿ ರಸ್ತೆಯ ರಿಟ್ಸ್ ಕಾರಟನ್ ಹೋಟೆಲ್ನಲ್ಲಿ ಮೇಳ ನಡೆಯಲಿದ್ದು, ಒಂದೇ ಸೂರಿನಡಿ ಭಾರತದ ಶ್ರೇಷ್ಠ ವಿನ್ಯಾಸಕರಿಂದ ಮೂಡಿ ಬಂದ ಅತ್ಯುತ್ತಮ ಬ್ರಾಂಡ್ ಆಭರಣಗಳನ್ನು ಖರೀದಿಸಲು ವೇದಿಕೆ ಸಜ್ಜಾಗಿದೆ. ಬೆಳಿಗ್ಗೆ 10.30 ರಿಂದ ರಾತ್ರಿ 8 ರವರೆಗೆ ಪ್ರದರ್ಶನ ನಡೆಯಲಿದೆ ಎಂದು ಸಂಯೋಜಕ ಹರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಗಸ್ಟ್ 9 ರಂದು ಮಧ್ಯಾಹ್ನ 12 ಗಂಟೆಗೆ ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ದೇಶದ ಪ್ರಸಿದ್ಧ ಉನ್ನತ ಆಭರಣ ತಯಾರಕರು ತಯಾರಿಸಿದ ಅತ್ಯುತ್ತಮ ಆಭರಣ ವಿನ್ಯಾಸಗಳನ್ನು ಪ್ರದರ್ಶಿಸಲಾಗುವುದು . ಚಿನ್ನದ ಬೆಲೆ ಕಡಿಮೆ ಆದ ಕಾರಣ ಮಹಿಳೆಯರು ಚಿನ್ನ ಕೊಳ್ಳಲು ಸುವರ್ಣಕಾಶವಿದು. ಅಲ್ಲದೆ, ನಮ್ಮ ರಾಜ್ಯದಲ್ಲಿ ಆಭರಣ ಪ್ರದರ್ಶನ ಮತ್ತು ಮೇಳ ನಡೆಯುತ್ತಿರುವುದರಿಂದ ಹೊರ ರಾಜ್ಯಗಳಿಗೆ ಹೋಗಿ ಅಭರಣಗಳ ಖರೀದಿ ಮಾಡುವ ಪ್ರಮೇಯ ಬರುವುದಿಲ್ಲ ಇದರಿಂದ ರಾಜ್ಯಕ್ಕೆ ಹೆಚ್ಚಿನ ಅದಾಯ ಬರುತ್ತದೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಸೊಗಸಾದ ಮತ್ತು ವಿಶ್ವ ದರ್ಜೆಯ ಆಭರಣಗಳನ್ನು ಇಲ್ಲಿ ಕಾಣಬಹುದು. ಬೆಂಗಳೂರು, ಮುಂಬೈ ಮತ್ತು ದೆಹಲಿ, ಜೈಪುರ, ಹೈದರಾಬಾದ್ ನ ಪ್ರಮುಖ ಬ್ರಾಂಡ್‌ಗಳ ಐಷಾರಾಮಿ ಆಭರಣ ವಿನ್ಯಾಸಗಳನ್ನು ಕಣ್‌ತುಂಬಿಕೊಳ್ಳಲು ಉತ್ತಮ ಅವಕಾಶ ಎಂದರು.

ಗಜರಾಜ್ ಜ್ಯುವೆಲ್ಲರ್ಸ್, ನಿಖರ್‌ಜ್ಯುವೆಲ್ಸ್ , ಸೃಷ್ಟಿ ಜ್ಯುವೆಲ್ಸ್ , ಸಿಂಹ ಜ್ಯುವೆಲ್ಲರ್ಸ್ ವರಶ್ರೀ ಜ್ಯುವೆಲ್ಸ್ , ಎಂಪಿ ಜ್ಯುವೆಲ್ಲರ್ಸ್, ಸೆಹಗಲ್ ಜ್ಯುವೆಲ್ಲರ್ಸ್ , ನೇಹಾ ಕ್ರಿಯೇಷನ್ಸ್ , ಹೇಮಾ ಕೊಠಾರಿ - ಮುಂಬೈ, ಶ್ರೀಹರಿ ಡಯಾಗೆಮ್ಸ್ ಬೈ ಅನಿರುದ್ಧ್, ಹೌಸ್ ಆಫ್ ಇಭಾನ್ , ಸೋಹಮ್ ಕ್ರಿಯೇಷನ್ಸ್ , ಕರಣ್ ಜೋಹರ್, ಶ್ರೀ ಗಣೇಶ್ ಡೈಮಂಡ್ಸ್ ಜ್ಯುವೆಲ್ಲರಿ , ಶ್ರೀ ಪರಮನೈ ಜ್ಯುವೆಲ್ಸ್ , ಸುನಿಲ್ ಜ್ಯುವೆಲ್ಲರ್ಸ್ , ಆಭೂಷಣ್ ಜ್ಯುವೆಲ್ಲರ್ಸ್ , ಫಿಯೋನಾ ಡೈಮಂಡ್ಸ್, ಜ್ಯುವೆಲ್ಲರಿ ಬೈ ನಿಖಿತಾ , ತ್ರಿ-ದಿಯಾ, ಕಹಾ ಡೈಮಂಡ್ಸ್ , ಎ್ ಝಡ್ ಜೆಮ್ಸ್ ಸೇರಿ ರಾಜ್ಯ ಹಾಗೂ ಹೊರ ರಾಜ್ಯಗಳ ಆಭರಣ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ವಿವರಿಸಿದರು.