ನ್ಯೂಸ್

ಕೊವಿಡ್​-19 ಸೋಂಕಿಗೆ ಒಳಗಾದ ಅಮಿತ್​ ಷಾ ನಡೆ ಬಗ್ಗೆ ಅಚ್ಚರಿ, ಅನುಮಾನ ವ್ಯಕ್ತಪಡಿಸಿದ ಶಶಿ ತರೂರ್​

ನವದೆಹಲಿ: ಗೃಹ ಸಚಿವ ಅಮಿತ್​ ಷಾ ಅವರು ಕರೊನಾ ಸೋಂಕಿಗೆ ಒಳಗಾಗಿದ್ದು, ಗುರ್​ಗಾಂವ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಆದರೆ ಈ ವಿಚಾರದ ಬಗ್ಗೆ ಕಾಂಗ್ರೆಸ್​ ನಾಯಕ ಶಶಿ ತರೂರ್​ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಶಶಿ ತರೂರ್​, ಅಮಿತ್​ ಷಾ ಅವರಲ್ಲಿ ಭಾನುವಾರ ಕೊವಿಡ್​-19 ಸೋಂಕು ದೃಢಪಟ್ಟಿದೆ. ಆದರೆ ಅವರು ದೆಹಲಿಯ ಏಮ್ಸ್​ಗೆ ದಾಖಲಾಗುವ ಬದಲು ನೆರೆ ರಾಜ್ಯದ ಖಾಸಗಿ ಆಸ್ಪತ್ರೆಯನ್ನೇಕೆ ಆಯ್ಕೆ ಮಾಡಿಕೊಂಡಿದ್ದಾರೆ? ಈ ಬಗ್ಗೆ ತುಂಬ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಹಾಗೇ, ಸಾರ್ವಜನಿಕ ಸಂಸ್ಥೆಗಳು ಸಾಮಾನ್ಯ ಜನರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದರೆ ಅವುಗಳಿಗೆ ಪ್ರಬಲರ ಪ್ರೋತ್ಸಾಹವೂ ಬೇಕು ಎಂದು ಶಶಿ ತರೂರ್​ ಟ್ವೀಟ್​ ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಹೇಗಿದೆ ಗೊತ್ತಾ ರಾಮಮಂದಿರ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆ? ಮೊದಲ ಇನ್ವಿಟೇಶನ್​ ಕಾರ್ಡ್​ ಹೋಗಿದ್ದು ಯಾರಿಗೆ?

ಗೃಹ ಸಚಿವ ಅಮಿತ್​ ಷಾ ಅವರು ಭಾನುವಾರ ಟ್ವೀಟ್​ ಮಾಡಿ ತಮಗೆ ಕರೊನಾ ಸೋಂಕು ತಗುಲಿದ್ದಾಗಿ ಹೇಳಿದ್ದರು. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದೂ ತಿಳಿಸಿದ್ದರು. (ಏಜೆನ್ಸೀಸ್​)