Chennai: ತಮಿಳುನಾಡಿನ ಕರೂರಿನಲ್ಲಿ ಸೆ. 27ರಂದು ನಡೆದ ಕಾಲ್ತುಳಿತ ನಡೆದು 41 ಮಂದಿ ಮೃತಪಟ್ಟು 20 ದಿನ ಕಳೆದಿದೆ. ಆದರೂ ಇಲ್ಲಿಯವರೆಗೂ ಕರೂರುಗೆ ಭೇಟಿ ನೀಡದ ಟಿವಿಕೆ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್ ವಿರುದ್ಧ ಆಡಳಿತರೂಢ ಡಿಎಂಕೆ(DMK) ಶನಿವಾರ(ಅ. 18) ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಡಿಎಂಕೆ ಐಟಿವಿಂಗ್, ಕರೂರಿನಲ್ಲಿ ಕೇವಲ ಪಕ್ಷದ ಪ್ರಚಾರಕ್ಕಾಗಿ ಜನಸಮೂಹವನ್ನು ಒಟ್ಟುಗೂಡಿಸುವ ಉನ್ಮಾದದ ಪ್ರಯತ್ನದಿಂದಾಗಿ, ಕಾಲ್ತುಳಿತದ ದುರ್ಘಟನೆ ನಡೆದು 41 ಮಂದಿ ಮೃತರಾಗಿ ಇಂದಿಗೆ 20 ದಿನಗಳು ಕಳೆದಿವೆ. ಆದರೆ ಟಿವಿಕೆ ಪಕ್ಷದ ನಾಯಕ ಪ್ರಾಣ ಕಳೆದುಕೊಂಡ ಕುಟುಂಬಸ್ಥರನ್ನು ಇನ್ನೂ ವೈಯಕ್ತಿಕವಾಗಿ ಭೇಟಿ ಆಗಿಲ್ಲ, ಸಾಂತ್ವನ ಹೇಳಿಲ್ಲ. ಮೃತಪಟ್ಟವರಿಗೆ ಸಂತಾಪವನ್ನು ಸೂಚಿಸಿಲ್ಲ.
ಪಕ್ಷದ ವತಿಯಿಂದ ನೀಡುತ್ತೇನೆ ಎಂದ ಪರಿಹಾರ ನಿಧಿಯನ್ನು ಸಹ ನೀಡಿಲ್ಲ. ಈ ಮೋಸದ ಮೌನವು ಜೀವ ಕಳೆದುಕೊಂಡವರ ಕುಟುಂಬಗಳಿಗೆ ತೋರಿಸುವ ಅಗೌರವದ ಕೃತ್ಯವಾಗಿದೆ. ವಿಜಯ್ ಅವರಿಗೆ ಭೇಟಿ ನೀಡಲು ಸಮಯವಿಲ್ಲವೇ, ಅಥವಾ ಸ್ಕ್ರಿಫ್ಟ್ ಸಿದ್ದವಾಗಿಲ್ಲವೇ?, ಇಲ್ಲ ಆ ಪಕ್ಷದ ನಿಘಂಟಿನಲ್ಲಿ ಮಾನವೀಯತೆ ಇಲ್ಲವೇ?, ಇನ್ನು ರಕ್ಷಣೆಯೆ ನೆಪ ಕೋರಿದ್ದನ್ನು ನೆಪ ಹೇಳುತ್ತೀರಾ? ಎಂದು ಕಿಡಿಕಾರಿದೆ.
ಟಿವಿಕೆ ಪಕ್ಷ ಕಟ್ಟಿ ಮುಂದಿನ ಚುನಾವಣೆಗೆ ಸಿದ್ದತೆ ನಡೆಸಿರುವ ದಳಪತಿ ವಿಜಯ್, ಕಳೆದ ತಿಂಗಳು ತಮ್ಮ ಪಕ್ಷದ ವತಿಯಿಂದ ವೀಕೆಂಡ್ ಸಮಯದಲ್ಲಿ ರಾಜ್ಯಪ್ರವಾಸ ಕೈಗೊಂಡಿದ್ದರು. ಅದರ ಭಾಗವಾಗಿ ಸೆ. 27ರಂದು ಕರೂರಿನಲ್ಲಿ ನಡೆದ ರ್ಯಾಲಿ ವೇಳೆ ಕಾಲ್ತುಳಿತ ನಡೆದ 41 ಮಂದಿ ಮೃತಪಟ್ಟು, 60 ಮಂದಿ ಗಾಯಗೊಂಡಿದ್ದರು.
ಘಟನೆ ಸಂಬಂಧ ಆಡಳಿತರೂಡ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ನಡುವೆ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದ್ದು, ಘಟನೆಗೆ ಏನು ಪ್ರಮುಖ ಕಾರಣ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)