ನ್ಯೂಸ್

ಭಯೋತ್ಪಾದಕರ ದಾಳಿ; ಇಬ್ಬರು ಭಾರತೀಯರ ಹತ್ಯೆ, ಓರ್ವ ನಾಪತ್ತೆ | Niger

Vijayavani Webdesk

Niger: ನೈಋತ್ಯ ನೈಜರ್​ನಲ್ಲಿ ಭಯೋತ್ಪಾದಕ ದಾಳಿ ನಡೆದು ಇಬ್ಬರು ಭಾರತೀಯರು ಹತ್ಯೆಯಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ ಎಂದು ನೈಜರ್​ನ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

ಜುಲೈ 15 ರಂದು ನೈಜರ್​ ರಾಜಾಧಾನಿ ನಿಯಾಮಿಯಿಂದ 130 ಕಿಮೀ ದೂರದಲ್ಲಿರುವ ಡೋಸೋ ಪಟ್ಟಣದಲ್ಲಿ ನಿರ್ಮಾಣ ಕಟ್ಟಡದಲ್ಲಿ ಕಾವಲು ಕಾಯುತ್ತಿದ್ದ ಸೇನೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಮೃತದೇಹಗಳನ್ನು ಸ್ವದೇಶಕ್ಕೆ ರವಾನಿಸಲು ಭಾರತೀಯ ರಾಯಭಾರಿ ಕಚೇರಿ ಸಿದ್ಧತೆ ನಡೆಸಿದೆ. ಅಪಹರಣಕ್ಕೆ ಒಳಗಾಗಿರುವ ಭಾರತೀಯನ ಬಿಡುಗಡೆಗೆ ಪ್ರಯತ್ನಿಸುತ್ತಿರುವುದಾಗಿ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಜೊತೆಗೆ ಪಶ್ಚಿಮ ಆಫ್ರಿಕಾದಲ್ಲಿ ಸುರಕ್ಷಿತರಾಗಿರುವಂತೆ ಭಾರತೀಯರಿಗೆ ಎಚ್ಚರಿಕೆ ನೀಡಿದೆ.