Tourists Attack : ಜಮ್ಮು-ಕಾಶ್ಮೀರಾದ ಪಹಲ್ಲಾಮ್ ಪ್ರದೇಶದಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. 27 ಕ್ಕೂ ಅಧಿಕ ಟೂರಿಸ್ಟ್ ಬಲಿಯಾಗಿದ್ದಾರೆ. ಇದರಲ್ಲಿ ಕರ್ನಾಟಕದ ಶಿವಮೊಗ್ಗದ ವಿಜಯನಗರ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರನ್ನು ಉಗ್ರರು ಪತ್ನಿಯ ಎದುರು ಕೊಂದಿದ್ದಾರೆ.
ಭಯೋತ್ಪಾದಕ ದಾಳಿಯ (Pahalgam Terrorist Attack) ಕುರಿತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಮಿತ್ ಶಾ ಅವರಿಗೆ ದೂರವಾಣಿಯಲ್ಲಿ ಕರೆ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಜ್ಞೆ ಮಾಡಿದ್ದಾರೆ. ದಾಳಿ ನಡೆಸಿದವರಿಗೆ ಅತ್ಯಂತ ಕಠಿಣ ಪರಿಣಾಮಗಳನ್ನು ಎದುರಿಸುವ ಭರವಸೆ ನೀಡಿದ ಶಾ, ಎಲ್ಲಾ ಸಂಸ್ಥೆಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸಲು ಶೀಘ್ರದಲ್ಲೇ ಶ್ರೀನಗರಕ್ಕೆ ತೆರಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:2005ರ ಘಟನೆ, 20 ವರ್ಷಗಳಿಂದ ನಿದ್ರೆಯಲ್ಲೇ ಬದುಕು! ಸೌದಿ ಅರೇಬಿಯಾ ರಾಜಕುಮಾರನ ದುರಂತ ಕಥೆಯಿದು | Sleeping Prince
ಈ ಕುರಿತು ಟ್ವಿಟ್ ಮಾಡಿರುವ ಶಾ, ''ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ತಲ್ಲಣಗೊಂಡಿದೆ. ನನ್ನ ಆಲೋಚನೆಗಳು ಮೃತರ ಕುಟುಂಬ ಸದಸ್ಯರೊಂದಿಗೆ ಇವೆ. ಈ ಭೀಕರ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಿಡಲಾಗುವುದಿಲ್ಲ ಮತ್ತು ನಾವು ದುಷ್ಕರ್ಮಿಗಳ ಮೇಲೆ ತೀವ್ರತರವಾದ ಪರಿಣಾಮಗಳನ್ನು ಎದುರಿಸುತ್ತೇವೆ'' ಎಂದಿದ್ದಾರೆ.(ಏಜೆನ್ಸೀಸ್)