ನ್ಯೂಸ್

ಉಗ್ರ ದಾಳಿಗೆ ಬಲಿಯಾದ ಸಿಆರ್​ಪಿಎಫ್​ ಯೋಧ ಹಾಗೂ ಮಗು

sspmiracle1982

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದ ಹೆದ್ದಾರಿ ಭದ್ರತೆ ಪ್ರದೇಶಕ್ಕೆ ನಿಯೋಜಿಸಲಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಸಿಆರ್‌ಪಿಎಫ್​​ನ ಒಬ್ಬ ಯೋಧ ಗಾಯಗೊಂಡು ಹುತಾತ್ಮರಾಗಿದ್ದಾರೆ. ಭಯೋತ್ಪಾದಕರು ಮಗುವೊಂದರ ಮೇಲೂ ಸಹ ದಾಳಿ ಮಾಡಿ ಹತ್ಯೆ ಗೈದಿದ್ದಾರೆ ಎಂದು ಸಿಆರ್​ಪಿಎಫ್ ತಿಳಿಸಿದೆ.