ಟೋಕಿಯೋ: ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ನಿಲುವನ್ನು ಎತ್ತಿ ತೋರಿಸಲು ಮತ್ತು ಪಾಕಿಸ್ತಾನದ ನಿಜರೂಪವನ್ನು ಬಯಲು ಮಾಡಲು ಸರ್ವಪಕ್ಷ ನಿಯೋಗ ಜಪಾನ್‌ಗೆ ತೆರಳಿದೆ. ಇನ್ನೂ ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದು, ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ತಾನದ ವಿರುದ್ಧ ಟೀಕಿಸಿದ್ದಾರೆ.
ಇದನ್ನೂ ಓದಿ: ʼಮೈಸೂರು ಸ್ಯಾಂಡಲ್ ಸೋಪ್ಗೆ ರಾಯಭಾರಿ ಬೇಕಿರಲಿಲ್ಲʼ; ತಮನ್ನಾ ಆಯ್ಕೆಯನ್ನು ಟೀಕಿಸಿದ ನಟಿ ರಮ್ಯಾ | Social Media Post
ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಜಾಗತಿಕವಾಗಿ ಧ್ವನಿ ಎತ್ತಲು ಭಾರತ ಸರ್ಕಾರ ಎಲ್ಲಾ ಪಕ್ಷದ ನಾಯಕರ ಸಹಭಾಗ್ವಿತದಿಂದ ಸಂಸದರ ನಿಯೋಗವನ್ನು ತಮ್ಮ ಮಿತ್ರರಾಷ್ಟ್ರ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಕಳುಹಿಸಿದೆ. ಇದೀಗ ಜಪಾನ್‌ಗೆ ಭೇಟಿ ನೀಡಿರುವ ಭಾರತದ ನಿಯೋಗದ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಬ್ಯಾನರ್ಜಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತವು ಮೇ 7 ರಂದು ನಡೆಸಿದ ನಿಖರವಾದ ವಾಯುದಾಳಿಯನ್ನು ಎತ್ತಿ ತೋರಿಸಿದರು. ಇದರ ನಂತರ ಮುಂದಿನ ಮೂರು ದಿನಗಳ ಕಾಲ ಪಾಕಿಸ್ತಾನ, ಭಾರತೀಯ ಸೇನಾ ನೆಲೆಗಳ ಮೇಲೆ ಪ್ರತೀಕಾರದ ದಾಳಿ ನಡೆಸಲು ಯತ್ನಿಸಿತು ಎಂದರು.
ಭಾರತ ಪಾಕಿಸ್ತಾನದ ಮುಂದೆ ತಲೆಬಾಗುವುದಿಲ್ಲ, ನಿಮ್ಮ ತಪ್ಪು ಮಾಹಿತಿಯನ್ನು ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತಿಳಿಸಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ಭಯಕ್ಕೆ ಮಣಿಯುವುದಿಲ್ಲ. ನಾನು ಭಾರತದಲ್ಲಿ ವಿರೋಧ ಪಕ್ಷದಲ್ಲಿರುವ ರಾಜಕೀಯ ವ್ಯಕ್ತಿ, ಆದರೆ ನನ್ನ ದೇಶದ ವಿಚಾರ ಬಂದಾಗ ನಾನು ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಪಾಠ ಕಲಿಸಬೇಕು ಎಂಬ ನನ್ನ ಮಾತು ಸಾರ್ವಜನಿಕ ವಲಯದಲ್ಲಿದೆ. ಭಯೋತ್ಪಾದಕರು ಹುಚ್ಚು ನಾಯಿಯಾಗಿದ್ದರೆ, ಅವರನ್ನು ಸಾಕುವ ಪಾಕಿಸ್ತಾನ ನಾಯಿ ಎಂದು ಹೇಳಿದ್ದಾರೆ. ಈ ದುಷ್ಟ ಹ್ಯಾಂಡ್ಲರ್ ವಿರುದ್ಧ ಹೋರಾಡಲು ನಾವು ಮೊದಲು ಜಗತ್ತನ್ನು ಒಗ್ಗೂಡಿಸಬೇಕು. ಇಲ್ಲದಿದ್ದರೆ, ಈ ದುಷ್ಟ ಹ್ಯಾಂಡ್ಲರ್ ಹೆಚ್ಚು ಹುಚ್ಚು ನಾಯಿಗಳನ್ನು ಸಾಕುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ತ್ರೀ ವೇಷ ಧರಿಸಿ ಪುರುಷರ ಅಶ್ಲೀಲ ದೃಶ್ಯ ಸೆರೆಹಿಡಿದು ಮಾರಾಟ ಮಾಡುತ್ತಿದ್ದ ಸರ್ಕಾರಿ ವೈದ್ಯ! Govt Doctor
(ಏಜೆನ್ಸೀಸ್)
ಅಭಿಷೇಕ್ ಬ್ಯಾನರ್ಜಿ ಅವರು ಭಾರತೀಯ ವಲಸಿಗರು ನಮ್ಮ ದೇಶದ "ಶ್ರೇಷ್ಠ ಆಸ್ತಿ" ಎಂದು ಕರೆದಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ಸಂದೇಶದ ಪ್ರತಿಪಾದಕರಾಗಿ ಎಂದು ಕರೆ ನೀಡಿದ್ದಾರೆ.