ನ್ಯೂಸ್

Israel-Hamas War: ಅಲ್-ಖೈದಾ ಮುಂದಿನ ಟಾರ್ಗೆಟ್ ಈ ದಿಗ್ಗಜ ಉದ್ಯಮಿಗಳು; ಲೋನ್ ವುಲ್ಫ್ ನಂತೆ ಕೆಲಸ ಮಾಡಲು ಕರೆ

ಇಸ್ರೇಲ್: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ನಿಲುವಿನಿಂದಾಗಿ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಕೋಪಗೊಂಡಿದೆ. ಅಮೆರಿಕದ ದೈತ್ಯ ಉದ್ಯಮಿಗಳಾದ ಎಲೋನ್ ಮಸ್ಕ್, ಬಿಲ್ ಗೇಟ್ಸ್ ಮತ್ತು ಸತ್ಯ ನಾಡೆಲ್ಲಾ ಅವರನ್ನು ಕೊಲ್ಲುವುದಾಗಿ ಮತ್ತು ಅಮೆರಿಕದ ಆರ್ಥಿಕತೆಯನ್ನು ಗುರಿಯಾಗಿಸಿಕೊಂಡು ತನ್ನ ಚಾಟ್ ರೂಮ್ ಮೂಲಕ ಬೆದರಿಕೆ ಹಾಕಿದೆ.

ವರದಿಯ ಪ್ರಕಾರ ಪ್ಯಾನ್-ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅಲ್-ಖೈದಾ, ತನ್ನ ಬೆಂಬಲಿಗರಿಗೆ ಅಮೆರಿಕ, ಬ್ರಿಟಿಷ್ ಮತ್ತು ಫ್ರೆಂಚ್ ಕಂಪನಿಗಳು ನಿರ್ವಹಿಸುವ ವಿಮಾನಗಳ ಮೇಲೆ ದಾಳಿ ಮಾಡುವಂತೆ ಮನವಿ ಮಾಡಿದೆ. ಅಲ್-ಖೈದಾದ ಪಟ್ಟಿಯಲ್ಲಿ ಅಮೆರಿಕನ್ ಏರ್‌ಲೈನ್ಸ್, ಕಾಂಟಿನೆಂಟಲ್, ಡೆಲ್ಟಾ, ಬ್ರಿಟಿಷ್ ಏರ್‌ವೇಸ್, ಏರ್ ಫ್ರಾನ್ಸ್ ಮತ್ತು ಏರ್ ಫ್ರಾನ್ಸ್-ಕೆಎಲ್‌ಎಂ ಸೇರಿವೆ.

ಪ್ಯಾನ್ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಗುಂಪಿನ ಮಾಧ್ಯಮ ವಿಭಾಗ ಅಲ್-ಮಲಾಹೆಮ್, ಇಸ್ರೇಲ್‌ ಬೆಂಬಲಿಸುತ್ತಿರುವ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದೆ. ವಿಡಿಯೋ ಕ್ಲಿಪ್‌ನಲ್ಲಿ, ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ನಿಂತು ಓಪನ್ ಸೋರ್ಸ್ ಜಿಹಾದ್‌ಗೆ ಕರೆ ನೀಡಿದೆ. ಅಡುಗೆ ಪಾತ್ರೆಗಳನ್ನು ಬಳಸಿ ಬಾಂಬ್‌ಗಳನ್ನು ತಯಾರಿಸಲು ಮಹತ್ವಾಕಾಂಕ್ಷೆಯ ಮುಜಾಹಿದೀನ್‌ಗಳಿಗೆ ಅವರು ಮಾಹಿತಿ ನೀಡಿದ್ದಾರೆ.

ಮಸ್ಕ್, ಗೇಟ್ಸ್ ಮತ್ತು ಮಾಜಿ ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಬೆನ್ ಬರ್ನಾಂಕೆ ಯಹೂದಿ-ಅಮೆರಿಕ ಆರ್ಥಿಕತೆಯ ಭಾಗವಾಗಿದ್ದಾರೆ ಎಂದು ಅಲ್-ಖೈದಾ ಹೇಳಿದೆ. ಇದರಿಂದಾಗಿ ಆ ಜನರೆಲ್ಲ ನಮ್ಮ ಗುರಿಯಲ್ಲಿದ್ದಾರೆ. ಇಸ್ರೇಲ್‌ನ ಹಮಾಸ್ ಯುದ್ಧದಲ್ಲಿ ಅವರು ಯಹೂದಿಗಳನ್ನು ಬೆಂಬಲಿಸಿದ್ದಾರೆ ಎಂದು ಅಲ್-ಖೈದಾ ಹೇಳಿದೆ. ಇದರಿಂದಾಗಿ ಅವರೆಲ್ಲ ನಮ್ಮ ಗುರಿಯಾಗಿದ್ದಾರೆ. ಏಕೆಂದರೆ ಅವರು ಇಸ್ರೇಲ್-ಹಮಾಸ್ ಯುದ್ಧದಲ್ಲಿ ಯಹೂದಿಗಳನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದೆ.

ಉಗ್ರಗಾಮಿ ಸಾಹಿತ್ಯದ ಮೂಲಕ ಮುಸ್ಲಿಮರನ್ನು ಓಲೈಸಲು ಪ್ರಯತ್ನಿಸುತ್ತಿದೆ. ಇದಲ್ಲದೇ ಬಾಂಬ್ ತಯಾರಿಕೆಗೆ ಬೇಕಾದ ಮೂಲಭೂತ ತರಬೇತಿ ನೀಡಿ ಒಂಟಿ ತೋಳದಂತೆ ಕೆಲಸ ಮಾಡುವುದನ್ನು ಕಲಿಸಲಾಗುತ್ತಿದೆ. ಓಪನ್ ಸೋರ್ಸ್ ಜಿಹಾದ್ ಎಂಬ ಪದವನ್ನು ಮೊದಲು ಅಲ್ ಮಲಾಹೆಮ್ ತನ್ನ ಇಂಗ್ಲಿಷ್ ನಿಯತಕಾಲಿಕದಲ್ಲಿ ಜುಲೈ 2010 ರಲ್ಲಿ ಸೃಷ್ಟಿಸಿತು.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುಎಸ್ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವ ನಾಯಕರನ್ನು ಭೇಟಿಯಾಗುತ್ತಿರುವುದನ್ನು ಅಲ್-ಖೈದಾ ವಿಡಿಯೋ ತೋರಿಸಿದೆ. ಅಲ್-ಖೈದಾ ಅವರು ಇಸ್ಲಾಂ ಧರ್ಮದ ಮೇಲೆ ಯುದ್ಧ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.