ನ್ಯೂಸ್

Viral News: ಗೋಧಿ ಕಟಾವು ಮಷಿನ್‌ ಒಳಗೆ ಸಿಲುಕಿ ಬಾಲಕ ಮೃತ್ಯು!

ಆಗ್ರಾ: ಗೋದಿ ಕಟಾವು ಯಂತ್ರದಲ್ಲಿ ಸಿಲುಕಿ 14 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಭೀಕರ ಘಟನೆಯಲ್ಲಿ ಬಾಲಕನ ದೇಹ ಛಿದ್ರಗೊಂಡಿದೆ. ಈ ದೃಶ್ಯ ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಸದ್ಯ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮೂಲಗಳ ಪ್ರಕಾರ, 14 ವರ್ಷದ ಬಾಲಕ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಗೋಧಿ ಕಟಾವು ಯಂತ್ರವನ್ನು ನಿರ್ವಹಿಸುತ್ತಿದ್ದ. ಆದರೆ, ಏಕಾಏಕಿ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಯಂತ್ರದ ಮೇಲೆ ಇಟ್ಟಿದ್ದ ಟಾರ್ಪಾಲಿನ್ ಹಾರಿ ಹೋಗಿದ್ದು, ಇದರಿಂದ ನಿಯಂತ್ರಣದ ತಪ್ಪಿದ ಬಾಲಕ ಟಾರ್ಪಾಲ್​​ ಸಮೇತ ಕಟಾವು ಯಂತ್ರದೊಳಗೆ ಬಿದ್ದಿದ್ದಾನೆ.

ಬಾಲಕ ಕಿರುಚುವ ಧ್ವನಿ ಕೇಳುತ್ತಿದ್ದಂತೆ ಅಕ್ಕಪಕ್ಕದ ಜಮೀನಿನಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಅಗಮಿಸಿದರು. ಅಷ್ಟೋತ್ತಿಗಾಗಲೇ ಬಾಲಕನ ದೇಹ ಛಿದ್ರಗೊಂಡಿತ್ತು ಎನ್ನಲಾಗಿದೆ.

ಯಂತ್ರದ ಬಳಿ ತಲುಪಿದಾಗ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ದುರದೃಷ್ಟಕರ ಬಾಲಕ ಯಂತ್ರದೊಳಗೆ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು. ನಂತರ ಬಾಲಕನನ್ನು ಬಹಳ ಕಷ್ಟಪಟ್ಟು ಯಂತ್ರದಿಂದ ಹೊರತೆಗೆಯಲಾಗಿದ್ದು, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.

ಕಟಾವು ಯಂತ್ರದ ಬಳಿ ತಲುಪಿದಾಗ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ದುರದೃಷ್ಟಕರ ಬಾಲಕ ಯಂತ್ರದೊಳಗೆ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು. ನಂತರ ಬಾಲಕನನ್ನು ಬಹಳ ಕಷ್ಟಪಟ್ಟು ಯಂತ್ರದಿಂದ ಹೊರತೆಗೆಯಲಾಗಿದ್ದು, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.