ಲುಸಾಕಾ: ಮೊಸಳೆಯು ತನ್ನ ಬಿಗಿಯಾದ ಹಲ್ಲುಗಳಿಂದ ಹಿಡಿದಿಟ್ಟುಕೊಂಡಿದ್ದ ಮಾಂಸದ ತುಣುಕನ್ನು ಚಿರತೆಯೊಂದು ಎಳೆದೆಳೆದು ತಿಂದು ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಮೈನವಿರೇಳಿಸುವಂತಿದೆ.
ವಿಡಿಯೋವನ್ನು ಜಾಂಬಿಯಾ ರಾಷ್ಟ್ರದ ಸೌತ್ ಲೌಂಗ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ.
ವಿಡಿಯೋದಲ್ಲಿ ಏನಿದೆ?: ಹಸಿದ ಚಿರತೆಯೊಂದು ಆಹಾರವನ್ನು ಅರಸಿ ಬರುತ್ತಿರುವಾಗ ಮಲಗಿರುವ ಮೊಸಳೆಯನ್ನು ನೋಡುತ್ತದೆ. ಬಳಿಕ ಅದರ ಮುಂಭಾಗ ಬಂದು ಬಾಯಿಯಲ್ಲಿ ಸಿಲುಕಿರುವ ಮಾಂಸದ ತುಣುಕನ್ನು ಕಿತ್ತುಕೊಳ್ಳಲು ಯತ್ನಿಸುತ್ತದೆ. ಎರಡು ಮೂರು ಬಾರಿ ಪ್ರಯತ್ನಿಸಿ ಬಾಯಿಯ ತುದಿಯಿಂದಲೇ ಒಂದು ತುಣುಕು ಮಾಂಸವನ್ನು ಕಿತ್ತು ತಿನ್ನುತ್ತದೆ. ಮತ್ತೆ ಸಾಕಷ್ಟು ಬಾರಿ ಪ್ರಯತ್ನಿಸಿ ಒಂದು ದೊಡ್ಡ ಮಾಂಸದ ತುಣುಕನ್ನೇ ಕಿತ್ತುಕೊಂಡು ಮೊಸಳೆ ಕಣ್ಣು ಬಿಡುವಷ್ಟರಲ್ಲಿ ಓಡಿ ಹೊಗುತ್ತದೆ. ಬಳಿಕ ಎಚ್ಚರಗೊಂಡ ಮೊಸಳೆ ಮಾಂಸವನ್ನು ಕಚ್ಚಿಕೊಂಡ ವೇಗವಾಗಿ ತವಳುತ್ತದೆ.
ಈ ವಿಡಿಯೋವನ್ನು 29 ವರ್ಷದ ವನ್ಯ ಜೀವಿ ನಿರ್ದೇಶಕ ನಿಕೋಲ್ ಡ್ಯಾಂಗೂರ್ ಎಂಬುವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋವನ್ನು ಪಾಸಿಟಿವ್ಲಿ ಪ್ರಸೆಂಟ್ ಹೆಸರಿನ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ. (ಏಜೆನ್ಸೀಸ್)