ಬ್ರೆಸಿಯಾ; ಹೆದ್ದಾರಿಯ ರಸ್ತೆಗೆ ವಿಮಾನವೊಂದು ಉರುಳಿ ಬಿದ್ದ ಪರಿಣಾಮ ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ಇಟಲಿಯ ಬ್ರೆಸಿಯಾ ಪ್ರಾಂತ್ಯದಲ್ಲಿ ನಡೆದಿದೆ.
ಇದನ್ನೂ ಓದಿ: ಹಸುವಿನ ಕೆಚ್ಚಲಿನಿಂದ ಮಗುವಿಗೆ ಹಾಲು ಕುಡಿಸಿದ ತಂದೆ! ಲೈಕ್ಗಳಿಗಾಗಿ ಹೀಗೆ ಮಾಡಬೇಡಿ ಎಂದ ನೆಟ್ಟಿಗರು…cow
ಬ್ರೆಸಿಯಾ ಬಳಿಯ A21 ಕಾರ್ಡಮೊಲ್ಲೆ-ಆಸ್ಪಿಟೇಲ್ ಹೆದ್ದಾರಿಯಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ವಿಮಾನವು ರಸ್ತೆಗೆ ನೇರವಾಗಿ ಬಿದ್ದು ಬೃಹತ್ ಬೆಂಕಿಯ ಉಂಡೆಯಾಗಿ ಹೊರಹೊಮ್ಮುವುದನ್ನು ಕಾಣಬಹುದು. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಭಯಾನಕ ವಿಡಿಯೋದಲ್ಲಿ, ಹತ್ತಿರದ ವಾಹನಗಳು ಸ್ಫೋಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಹೆದ್ದಾರಿಯನ್ನು ಆವರಿಸುತ್ತಿರುವ ಬೆಂಕಿಯನ್ನು ನೋಡಬಹುದು.
ಈ ಅಪಘಾತದ ಪರಿಣಾಮ ವಿಮಾನದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು 75 ವರ್ಷದ ವಕೀಲ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ 55 ವರ್ಷದ ಪತ್ನಿ ಅನ್ನಾ ಮಾರಿಯಾ ಡಿ ಸ್ಟೆಫಾನೊ ಎನ್ನಲಾಗಿದೆ. ವಿಮಾನವು ನಿಯಂತ್ರಣ ತಪ್ಪಿ ಜನನಿಬಿಡ ಹೆದ್ದಾರಿಗೆ ಡಿಕ್ಕಿ ಹೊಡೆಯುವ ಮೊದಲು ಕೆಲವೇ ಕ್ಷಣಗಳ ಮೊದಲು ಟೇಕ್ ಆಫ್ ಆಗಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ: ತಜ್ಞರ ಪ್ರಕಾರ ಈ ಒಂದು ಹಣ್ಣು ತಿನ್ನುವುದರಿಂದ ನಿಮ್ಮ ಹೃದಯ, ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ! Fruits
(ಏಜೆನ್ಸೀಸ್)
ಡಿಕ್ಕಿಯ ಪರಿಣಾಮವಾಗಿ ಎರಡು ಕಾರುಗಳು ಸುಟ್ಟು ಭಸ್ಮವಾಗಿವೆ. ಒಬ್ಬ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬನಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ, ಕಾರ್ಯಚರಣೆ ಆರಂಭಿಸಿವೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದು, ಅಧಿಕಾರಿಗಳು ಅವಶೇಷಗಳನ್ನು ತೆರವುಗೊಳಿಸಿ ಅಪಘಾತದ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.