ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್: ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪರಿಸ್ಥಿತಿ ಉದ್ವಿಗ್ನ

ಕೊಲ್ಲಾಪುರ: ವಿವಾದಾತ್ಮಕ ಪೋಸ್ಟ್​ವೊಂದಕ್ಕೆ ಸಂಬಂಧಿಸಿದಂತೆ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಸ್ಥಳದಲ್ಲಿ ಉದ್ವಿಗ್ನತೆ ಆವರಿಸಿದ ಘಟನೆ ಕೊಲ್ಲಾಪುರದಲ್ಲಿ ನಡೆದಿದೆ.

ಕೆಲ ಕಿಡಿಗೇಡಿಗಳು ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದನ್ನು ಹಾಕಿದ್ದರು. ಈ ಪೋಸ್ಟ್​​​ಗಳು ವಿವಾದಕ್ಕೆ ಕಾರಣವಾಗಿ ಅನೇಕ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲು ಇಂದು ಮುಂಜಾನೆ ಕೋಲ್ಹಾಪುರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ನಲ್ಲಿ ಜಮಾಯಿಸಿದ್ದರು.

ಈ ವೇಳೆ ಪ್ರತಿಭಟನಾಕಾರರ ಪೈಕಿ ಕೆಲವರು ಅಂಗಡಿ ಮತ್ತು ವಾಹನಗಳನ್ನು ಧ್ವಂಸಗೊಳಿಸಿದಾಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಅನಿವಾರ್ಯವಾಗಿ ಈ ಜನರನ್ನು ಚದುರಿಸಲು ಪೊಲೀಸರು ತಮ್ಮ ಬಲಪ್ರಯೋಗ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)