ನ್ಯೂಸ್

ಎಲ್ಲರೂ ತಪ್ಪದೆ ಮತದಾನ ಮಾಡಿ; ಪರಶುರಾಮ ಪೂಜಾರ

Haveri - Kariyappa Aralikatti

ರಾಣೆಬೆನ್ನೂರ: ಪ್ರಜಾಪ್ರಭುತ್ವದ ಹಬ್ಬವಾದ ಮೇ 7ರಂದು ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಹೇಳಿದರು.
ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ಮೆಡ್ಲೇರಿ ಗ್ರಾಮದ ದೊಡ್ಡಕೆರೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆಯತ್ತಿರುವ ಕಾಮಗಾರಿ ಸ್ಥಳದಲ್ಲಿ ಅವರು ಮತದಾನ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.
ಮತದಾನಕ್ಕೆ ಪವಿತ್ರವಾದ ಸ್ಥಾನವಿದೆ. ಅದನ್ನು ಯಾರಿಗೂ ಆಮಿಷ್, ಆಸೆಗಳಿಗೆ ಮಾರಾಟ ಮಾಡಿಕೊಳ್ಳಬಾರದು. ಯೋಗ್ಯವಾದ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡಬೇಕು ಎಂದರು.
ತಾಲೂಕು ಐಈಸಿ ಸಂಯೋಜಕ ಡಿ.ವಿ. ಅಂಗೂರ ಮತದಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ತಾಂತ್ರಿಕ ಸಹಾಯಕ ಕಿಶೋರ, ಪುಟ್ಟಪ್ಪ ಒಡೆಯರ, ಗ್ರಾಮ ಪಂಚಾಯತಿ ಸಿಬ್ಬಂದಿ, ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.