ನ್ಯೂಸ್

ತೆಲುಗು Bigg Bossನಲ್ಲಿ ಕನ್ನಡದ ಧ್ವನಿ! ತಾಯಿ-ಮಗನ ಬಾಂಧವ್ಯ, ಕನ್ನಡಾಭಿಮಾನಕ್ಕೆ ನೆಟ್ಟಿಗರು ಫಿದಾ

ಬೆಂಗಳೂರು: ನಟ ಅಕ್ಕಿನೇನಿ ನಾಗರ್ಜುನ್ ಅವರು ನಡೆಸಿಕೊಡುತ್ತಿರುವ ಬಿಗ್​ಬಾಸ್​​ 8 ತೆಲಗು ಕಾರ್ಯಕ್ರಮದಲ್ಲಿ ಮೈಸೂರು ಮೂಲದ ನಿಖಿಲ್ ಮಳಿಯಕ್ಕಲ್ ಇದ್ದಾರೆ. ಕನ್ನಡ ನಟ ಇರುವುದು ಹೆಮ್ಮೆ ಆದರೆ ಇನ್ನೊಂದೆಡೆ ತೆಲುಗು ಬಿಗ್​ಬಾಸ್ ( Bigg Boss ) ಶೋನಲ್ಲಿ ಕನ್ನಡದ ಕಲರವ ಕೇಳಿ ಬಂದಿದೆ.

ಬಿಗ್​ಬಾಸ್​ನಲ್ಲಿ ( Bigg Boss ) ನಿಖಿಲ್ ಬೇಸರಕ್ಕೆ ಒಳಗಾಗಿ ನಾನು ನಿಮ್ಮನ್ನ ನೋಡದೇ ಇರುವುದಕ್ಕೆ ಆಗುತ್ತಿಲ್ಲ ಎಂದು ತಾಯಿಗೆ ಪತ್ರ ಬರೆದಿದ್ದರು. ಇದಕ್ಕಾಗಿ ಶೋನಲ್ಲಿ ತಾಯಿ ಮಾತಾಡಿದ್ದ ವಿಡಿಯೋ ಪ್ರಕಟಿಸಲಾಗಿದೆ. ಈ ವೇಳೆ ನಿಖಿಲ್ ಅವರ ತಾಯಿ ಕನ್ನಡದಲ್ಲಿ ಮಾತನಾಡಿ ಪ್ರೋತ್ಸಾಹ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?:  ‘ನೀನು ಹೆಂಗಿದೆಯೋ ಹಾಗೇ ಇರು. ಬೇರೆಯವರಿಗಾಗಿ ಚೇಂಜ್ ಮಾಡಿಕೊಳ್ಳಬೇಡ. ಎಮೋಷನಲ್ ಆಗಬೇಡ. ಎಲ್ಲರೂ ನಿನ್ನ ಜೊತೆ ರೇಸ್​ನಲ್ಲಿದ್ದಾರೆ. ನೀನು ಆಡುತ್ತಿರುವುದು ನನಗೆ ಸಖತ್ ಇಷ್ಟ ಆಗುತ್ತಿದೆ. ಕಪ್ ಲಿಫ್ಟ್​ ಮಾಡುವುದನ್ನ ನೋಡಲು ಕಾಯುತ್ತಿದ್ದೇವೆ. ಐ ಲವ್ ಯು ಕಂದ’ ಎಂದು ಹೇಳಿದ್ದಾರೆ. ಇದನ್ನೆಲ್ಲಾ ಕೇಳಿದ ಮೇಲೆ ವಿಡಿಯೋ ನೋಡುತ್ತಿದ್ದ ನಿಖಿಲ್ ಕಣ್ಣಲ್ಲಿ ನೀರು ಜಿನಿಗಿವೆ.

ಮೈಸೂರು ಮೂಲದ ನಟ ನಿಖಿಲ್ ಮಳಿಯಕ್ಕಲ್ ತೆಲುಗು ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದರು. ಗೊರಿಂಟಾಕು ಎನ್ನುವ ಧಾರಾವಾಹಿಯಲ್ಲಿ ಪಾರ್ಥು ಪಾತ್ರದ ಮೂಲಕ ತೆಲುಗುನಾಡಲ್ಲಿ ಫೇಮಸ್ ಆಗಿದ್ದರು. ಬಿಗ್​ಬಾಸ್​ನಲ್ಲಿ ಕಂಟೆಸ್ಟೆಂಟ್ ಆಗಿ ಬಿಗ್ ಹೌಸ್​ನಲ್ಲಿದ್ದಾರೆ.

ತಾಯಿ-ಮಗನ ಬಾಂಧವ್ಯ ಇಡೀ ಪ್ರೇಕ್ಷಕರನ್ನ ಸೆಳೆದಿದೆ. ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.