ಲಿಂಗನಮಕ್ಕಿ ನಮ್ಮನೆ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಸುಗ್ಗಿ ಮತ್ತು ರೈತ ನಮನ ಕಾರ್ಯಕ್ರಮದಲ್ಲಿ ಕೃಷಿಕ ಜಯೇಂದ್ರ ಕಡಕೋಡು ಅವರನ್ನು ಸನ್ಮಾನಿಸಲಾಯಿತು. ಪುಟ್ಟಪ್ಪ, ಕೆ.ವೀರೇಂದ್ರ, ಕೇಶವೇಗೌಡ ಇತರರಿದ್ದರು.  
ನ್ಯೂಸ್

ಮಕ್ಕಳಿಗೆ ಹಬ್ಬಗಳ ಮಹತ್ವ ತಿಳಿಸಿ

ಕಾರ್ಗಲ್: ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಿಂಗನಮಕ್ಕಿಯ ನಮ್ಮನೆ ಗ್ರಾಮೀಣ ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ಸಂಕ್ರಾಂತಿ ಸುಗ್ಗಿ ಹಾಗೂ ರೈತ ನಮನ ಕಾರ್ಯಕ್ರಮ ಆಚರಿಸಲಾಯಿತು.

ಭಾನುಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮದ ಕಡಕೋಡಿನ ಪಾರಂಪರಿಕ ಕೃಷಿಕ ಜಯೇಂದ್ರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಈ ಭಾಗದ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಸಂಕ್ರಾಂತಿ ಹಬ್ಬದ ವಿಶೇಷ ಪೊಂಗಲ್ ತಯಾರಿಸಿ ಭೋಜನ ಮಾಡಿದರು.

ರೈತರು ಬೆಳೆದ ಮೊದಲ ಫಸಲಿನ ರಾಶಿ ಮಾಡಿ ಸುಗ್ಗಿ ಮಾಡುವ ಸಂಪ್ರದಾಯ ಉಳಿಯಬೇಕು ಹಾಗೂ ನಮ್ಮ ದೇಶದ ಪಾರಂಪರಿಕ ಹಬ್ಬಗಳ ಮಹತ್ವ ಮಕ್ಕಳಿಗೆ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಸತಿ ನಿಲಯದ ಸಂಸ್ಥಾಪಕ ಸಂತೋಷ್ ಲಿಂಗನಮಕ್ಕಿ ತಿಳಿಸಿದರು.

ಕಂಚಿಕೈ ಶನೈಶ್ಚರ ದೇವಾಲಯ ಧರ್ಮದರ್ಶಿ ಪುಟ್ಟಪ್ಪ, ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ, ಉಪಾಧ್ಯಕ್ಷ ಕೇಶವೇಗೌಡ, ಉದಯಕುಮಾರ್ ಪಂಡಿತ್, ಗ್ರಾಮಸ್ಥ ಬಾಬಣ್ಣ, ಎಸ್‌ಡಿಎಂಸಿ ಅಧ್ಯಕ್ಷ ವೈ.ಜಿ.ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬಣ್ಣುಮನೆ, ವಸತಿ ನಿಲಯದ ಸಿಬ್ಬಂದಿ ಇದ್ದರು.