ನ್ಯೂಸ್

ಕಾನ್​ಸ್ಟೇಬಲ್​ ಕೊಂದ ಆರೋಪಿಯನ್ನು ಎನ್​ಕೌಂಟರ್ ಮಾಡಿದ ತೆಲಂಗಾಣ ಪೊಲೀಸರು! | Encounter

ಹೈದರಾಬಾದ್​: ಕಾನ್​ಸ್ಟೇಬಲ್​ನನ್ನು ಚಾಕುವಿನಿಂದ ಇರಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ತೆಲಂಗಾಣ ಪೊಲೀಸರು ಎನ್​ಕೌಂಟರ್​(Encounter)ಮಾಡಿದ ಘಟನೆ ನಿಜಮಾಬಾದ್​ನ ಸಾರಂಗಪುರದಲ್ಲಿ ಸೋಮವಾರ ನಡೆದಿದೆ.

ಕಾನ್‌ಸ್ಟೆಬಲ್ ಅಮರ್ ಎಂಪಳ್ಳಿ ಪ್ರಮೋದ್ ಕುಮಾರ್ ಎಂಬುವವರನ್ನು ಕೊಲೆ ಮಾಡಿ ಆರೋಪಿ ಶೇಖ್ ರಿಯಾಜ್ ಪರಾರಿಯಾಗಿದ್ದ. ಬಳಿಕ ರಿಯಾಜ್​ ಸಾರಂಗಪುರದ ಬಳಿ ಇರುವುದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ಹಿಡಿಯಲು ಯತ್ನಿಸಿದಾಗ ಪೊಲೀಸರ ಬಳಿಯಿದ್ದ ರಿವಲ್ವರ್​ ಕಸಿಯಲು ಪ್ರಯತ್ನ ಮಾಡಿದಾಗ ಪೊಲೀಸರು ರಿಯಾಜ್​​ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾನೆ ಎಂದು ಹೈದರಾಬಾದ್​ ಡಿಜಿಪಿ ಕಚೇರಿ ತಿಳಿಸಿದೆ.

ಕಳ್ಳತನ ಆರೋಪದ ಮೇಲೆ ರಿಯಾಜ್​​ನನ್ನು ಕಳೆದ ಶುಕ್ರವಾರ(ಅ.17) ಪೊಲೀಸ್​ ಠಾಣೆಗೆ ಕರೆದೊಯ್ಯುತ್ತಿದ್ದಾಗ ಕಾನ್​ಸ್ಪೇಬಲ್​ ಪ್ರಮೋದ್ ಕುಮಾರ್ (42) ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಕಾನ್​ಸ್ಟೇಬಲ್​ ಪ್ರಮೋದ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.(ಏಜೆನ್ಸೀಸ್)